Home ಟಾಪ್ ಸುದ್ದಿಗಳು ರಾಮನಗರ | ಮನುಷ್ಯನ ಬುರುಡೆಗಳು ಪತ್ತೆ: ಆರೋಪಿ ಅರೆಸ್ಟ್

ರಾಮನಗರ | ಮನುಷ್ಯನ ಬುರುಡೆಗಳು ಪತ್ತೆ: ಆರೋಪಿ ಅರೆಸ್ಟ್

ರಾಮನಗರ: ಜೋಗನಹಳ್ಳಿ ಗ್ರಾಮದ ಮನೆಯೊಂದರಲ್ಲಿ 20ಕ್ಕೂ ಹೆಚ್ಚು ಮನುಷ್ಯನ ಬುರುಡೆಗಳು ಸೋಮವಾರ ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಲರಾಮ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.


ಮನುಷ್ಯನ ಬುರುಡೆಗಳನ್ನು ಸಂಗ್ರಹಿಸಿರುವ ಬಲರಾಮ್ ಮಾಟ–ಮಂತ್ರ ಮಾಡುವ ಜೊತೆಗೆ, ರಾತ್ರಿ ಸ್ಮಶಾನದಲ್ಲಿ ಬುರುಡೆ ಪೂಜೆ ಮಾಡುತ್ತಾನೆ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ಕೊಟ್ಟಿದ್ದರು.
ಗ್ರಾಮಸ್ಥರ ದೂರಿನ ಮೇರೆಗೆ ಬಲರಾಮ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ಕೆಲ ವರ್ಷಗಳಿಂದ ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version