Home Uncategorized ಮೊದಲು 15 ಲಕ್ಷ ಕೊಡಿ: ಸುನಿಲ್ ಕುಮಾರ್‌ಗೆ ರಾಮಲಿಂಗಾ ರೆಡ್ಡಿ ಟಾಂಗ್

ಮೊದಲು 15 ಲಕ್ಷ ಕೊಡಿ: ಸುನಿಲ್ ಕುಮಾರ್‌ಗೆ ರಾಮಲಿಂಗಾ ರೆಡ್ಡಿ ಟಾಂಗ್

ಬೆಂಗಳೂರು: ಕೇವಲ ಸರ್ಕಾರಿ ಮಾತ್ರವಲ್ಲ ಉಡುಪಿ, ದಕ್ಷಿಣ ಕನ್ನಡದಲ್ಲಿ ಖಾಗಿ ಬಸ್‍ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂಬ ಶಾಸಕ ಸುನಿಲ್ ಕುಮಾರ್ ಹೇಳಿಕೆಗೆ ಇದೀಗ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ನೀಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೋರಿರೋದು ತಪ್ಪಲ್ಲ ಬಿಡಿ. ಅದು ಅವರ ಬೇಡಿಕೆಯಾಗಿದೆ. ಆದರೆ ಮೊದಲು 15 ಲಕ್ಷ ಕೊಡಿ. ಬಸ್ ದರ ಪರಿಷ್ಕರಣೆ ಇಲ್ಲ ಎಂದು ಹೇಳಿದರು.

ಸುನಿಲ್ ಕುಮಾರ್ ಟ್ವೀಟ್‍ನಲ್ಲಿ ಹೇಳಿದ್ದೇನು..?

ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಲಭ್ಯವಾಗುವುದು ಖಾಸಗಿ ಬಸ್‍ಗಳ ಮೂಲಕ. ಇಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್‍ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕು ಎಂದು ಬರೆದಿದ್ದರು.

Join Whatsapp
Exit mobile version