Home ಗಲ್ಫ್ ಮಕ್ಕಾ, ಮದೀನಾ: ರಂಜಾನ್ ಇಹ್‌ತಿಕಾಫ್ ನೋಂದಣಿ ವೇಳಾಪಟ್ಟಿ ಪ್ರಕಟ

ಮಕ್ಕಾ, ಮದೀನಾ: ರಂಜಾನ್ ಇಹ್‌ತಿಕಾಫ್ ನೋಂದಣಿ ವೇಳಾಪಟ್ಟಿ ಪ್ರಕಟ

ಮಕ್ಕಾ: ಈ ವರ್ಷದ ರಂಜಾನಿನ ಇಹ್‌ತಿಕಾಫ್‌ಗಾಗಿ ಮಕ್ಕಾ ಮದೀನಾ ಉಭಯ ಹರಮ್‌ಗಳಲ್ಲಿ ನೋಂದಣಿ ಪ್ರಕ್ರಿಯೆ ಶಅಬಾನ್ 25ರಂದು ಪ್ರಾರಂಭಗೊಳ್ಳಲಿದೆ ಎಂದು ವರದಿಯಾಗಿದೆ.

ಇಹ್‌ತಿಕಾಫ್ ನೋಂದಣಿ ಪ್ರಕ್ರಿಯೆ ಶಅಬಾನ್ 25ರಂದು ಪ್ರಾರಂಭಗೊಂಡು ರಂಜಾನ್ 10ರಂದು ಅಂತ್ಯಗೊಳ್ಳಲಿದೆ ಎಂದು ಉಭಯ ಹರಮ್ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಸಚಿವಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ನಿಯಮಾನುಸಾರವಾಗಿ ಇಹ್‌ತಿಕಾಫ್ ನೋಂದಣಿಗೆ ಅನುಮತಿ ನೀಡಲಾಗಿದೆ.

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಭಾಗವಾಗಿ ಕಳೆದ ವರ್ಷ ಉಭಯ ಹರಂಗಳಲ್ಲಿ ಇಹ್‌ತಿಕಾಫ್ ಕುಳಿತುಕೊಳ್ಳುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

Join Whatsapp
Exit mobile version