Home ಟಾಪ್ ಸುದ್ದಿಗಳು ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಯಾಗಿ ನಡೆದ “ ಯಂಗ್ ಇಂಡಿಯಾ ಬೋಲ್ ” ನಲ್ಲಿ ರಾಜ್ಯದಿಂದ...

ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಯಾಗಿ ನಡೆದ “ ಯಂಗ್ ಇಂಡಿಯಾ ಬೋಲ್ ” ನಲ್ಲಿ ರಾಜ್ಯದಿಂದ 15 ಮಂದಿ ಆಯ್ಕೆ: ಎಂ.ಎಸ್. ರಕ್ಷಾ ರಾಮಯ್ಯ

ಗೆದ್ದವರು ಇದೇ 14 ರ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗಿ

ಬೆಂಗಳೂರು: ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಜನಪರ ಸಮಸ್ಯೆಗಳ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ “ ಯಂಗ್ ಇಂಡಿಯಾ ಕಿ ಬೋಲ್ “ [ಯುವ ಭಾರತ ಮಾತನಾಡಿ] ಎಂಬ ರಾಜ್ಯ ಮಟ್ಟದ ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗಾಗಿ ನಡೆದ ಭಾಷಣ ಸ್ಪರ್ಧೆಯಲ್ಲಿ ಅಂತಿಮವಾಗಿ 15 ಮಂದಿ ಆಯ್ಕೆಯಾಗಿದ್ದಾರೆ ಎಂದು ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಇಡೀ ದಿನ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದ ಈ ಎಲ್ಲಾ ವಿಜೇತರನ್ನು ಇಂದು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಗೆದ್ದ ಸ್ಪರ್ಧಿಗಳನ್ನು ರಾಜ್ಯಮಟ್ಟದ ವಕ್ತಾರರಾಗಿ ನಿಯೋಜಿಸುತ್ತಿದ್ದು, ಇವರನ್ನು ರಾಷ್ಟ್ರ ಮಟ್ಟದ ವಕ್ತಾರರ ಸ್ಪರ್ಧೆಗೂ ಸಹ ಕಳುಹಿಸಲಾಗುತ್ತಿದೆ. ಇದೇ ತಿಂಗಳ 14 ರಂದು ದೆಹಲಿಯಲ್ಲಿ ರಾಷ್ಷ್ಟ್ರೀಯ ಹಂತದ ಸ್ಪರ್ಧೆಯಲ್ಲಿ ಇವರೆಲ್ಲರೂ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಜನಪರ ಸಮಸ್ಯೆಗಳು, ಅದರಲ್ಲೂ ಪ್ರಮುಖವಾಗಿ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಪ್ರಜಾ ಪ್ರಭುತ್ವದ ಕಗ್ಗೊಲೆ, ಬೆನ್ನು ಮುರಿಯುವ ಹಣದುಬ್ಬರ ತಡೆಯುವಲ್ಲಿ ಬಿಜೆಪಿ ಸರ್ಕಾರದ ವಿಫಲತೆ, ಕೊರೋನಾ ನಿರ್ವಹಣೆಯಲ್ಲಿನ ಲೋಪ ಕುರಿತು ಸ್ಪರ್ಧಿಗಳು ಪಾಂಡಿತ್ಯಪೂರ್ಣವಾಗಿ ತಮ್ಮ ವಿಷಯ ಮಂಡಿಸಿದರು ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.

ಇಡೀ ದಿನ ನಡೆದ ಭಾಷಣ ಸ್ಪರ್ಧೆಯನ್ನು ಯಂಗ್ ಇಂಡಿಯಾ ಬೋಲ್ ಕಾರ್ಯಕ್ರಮದ ಉಸ್ತುವಾರಿ ಪ್ರೀತಿ ಶೇಷ ಉದ್ಘಾಟಿಸಿದರು. ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್, ಸುರಭಿ ದ್ವಿವೇದಿ, ಬಲರಾಂ ಗೌಡ ಉಪಸ್ಥಿತರಿದ್ದರು.

Join Whatsapp
Exit mobile version