Home ಟಾಪ್ ಸುದ್ದಿಗಳು ನಿವೃತ್ತಿಗೆ ನಾಲ್ಕು ದಿನಗಳಿರುವಾಗ ದೆಹಲಿ ಪೊಲೀಸ್ ಆಯುಕ್ತರಾಗಿ ರಾಕೇಶ್ ಆಸ್ತಾನ : ನೇಮಕದ ವಿರುದ್ಧ ನಿರ್ಣಯ...

ನಿವೃತ್ತಿಗೆ ನಾಲ್ಕು ದಿನಗಳಿರುವಾಗ ದೆಹಲಿ ಪೊಲೀಸ್ ಆಯುಕ್ತರಾಗಿ ರಾಕೇಶ್ ಆಸ್ತಾನ : ನೇಮಕದ ವಿರುದ್ಧ ನಿರ್ಣಯ ಅಂಗೀಕರಿಸಿದ ದೆಹಲಿ ವಿಧಾನಸಭೆ

ನವದೆಹಲಿ ಜುಲೈ 29 : ದೆಹಲಿ ಪೊಲೀಸ್ ಆಯುಕ್ತರಾಗಿ ರಾಕೇಶ್ ಅಸ್ತಾನ ಅವರ ನೇಮಕವನ್ನು ವಿರೋಧಿಸಿ ಜುಲೈ 29 ರಂದು ದೆಹಲಿ ಅಸೆಂಬ್ಲಿ ನಿರ್ಣಯವೊಂದನ್ನು ಅಂಗೀಕರಿಸಿದೆ. ಮಾತ್ರವಲ್ಲದೆ ಅವರ ನೇಮಕವನ್ನು ಹಿಂಪಡೆಯುವಂತೆ ಗೃಹ ಸಚಿವಾಲಯವನ್ನು ಕೋರಿದೆ. ಈ ನಿರ್ಣಯವನ್ನು ಆಮ್ ಆದ್ಮಿ ಪಕ್ಷದ ಶಾಸಕರಾದ ಸಂಜೀವ್ ಜಾಹ್ ಅವರು ಮಂಡಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಗುಜರಾತ್ ಮೂಲದ ಐ.ಪಿ.ಎಸ್ ಅಧಿಕಾರಿಯಾಗಿರುವ ಅಸ್ತಾನ ಅವರನ್ನು ಜುಲೈ 27 ರಂದು ದೆಹಲಿಯ ನೂತನ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿತ್ತು. ಅವರು ಜುಲೈ 31 ರಂದು ನಿವೃತ್ತ ಹೊಂದಲಿದ್ದಾರೆ. 59 ವರ್ಷದ ಪ್ರಾಯದ ಅಸ್ತಾನ ಅವರು ಪ್ರಸ್ತುತ ಗಡಿ ಭದ್ರತಾ ಪಡೆ (ಬಿ.ಎಸ್.ಎಫ್) ನ ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ ಅವರು ಕೇಂದ್ರ ತನಿಖಾ ದಳದಲ್ಲಿ (ಸಿಬಿಐ) ವಿಶೇಷ ನಿರ್ಧೇಶಕರಾಗಿದ್ದರು. ನಿವೃತ್ತಿಗೆ ಇನ್ನು ಕೇವಲ 4 ದಿನಗಳು ಬಾಕಿಯಿರುವಾಗ ದೆಹಲಿಯ ನೂತನ ಪೊಲೀಸ್ ಆಯುಕ್ತರಾಗಿ ಅವರ ಆಯ್ಕೆ ಕಾನೂನುಬಾಹಿರ ಎಂದು ಆಮ್ ಆದ್ಮಿ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.

Join Whatsapp
Exit mobile version