Home ಟಾಪ್ ಸುದ್ದಿಗಳು ಪಂಜಾಬ್ ರಾಜ್ಯಸಭಾ ಚುನಾವಣೆ; “ಆಪ್” ನಿಂದ ಹರ್ಭಜನ್ ಸಹಿತ ಐದು ಮಂದಿ ಅಖಾಡಕ್ಕೆ

ಪಂಜಾಬ್ ರಾಜ್ಯಸಭಾ ಚುನಾವಣೆ; “ಆಪ್” ನಿಂದ ಹರ್ಭಜನ್ ಸಹಿತ ಐದು ಮಂದಿ ಅಖಾಡಕ್ಕೆ

Harbhajan Singh

ಚಂಡೀಗಡ: ಪಂಜಾಬ್‌ನ ಆಮ್ ಆದ್ಮಿ ಪಕ್ಷವು ರಾಜ್ಯದಿಂದ ಐವರು ರಾಜ್ಯಸಭಾ ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದು, ಆ ಪಟ್ಟಿಯಲ್ಲಿ ಖ್ಯಾತ ಬೌಲರ್ ಹರ್ಭಜನ್ ಸಿಂಗ್ ಕೂಡಾ ಸೇರಿದ್ದಾರೆ.

ಪಂಜಾಬ್‌ನ ಏಳು ರಾಜ್ಯಸಭಾ ಸ್ಥಾನಗಳ ಪೈಕಿ ಐದು ಸ್ಥಾನಗಳಿಗೆ ಮೇ 31 ರಂದು ಚುನಾವಣೆ ನಡೆಯಲಿದ್ದು, ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಪ್ 92 ಸ್ಥಾನ ಪಡೆದು ಜಯಗಳಿಸಿದೆ.

ಹರ್ಭಜನ್ ಸಿಂಗ್ ಸಹಿತ ಡಾ. ಸಂದೀಪ್ ಪಟ್ನಾಯಕ್,ಶಾಸಕ ರಾಘವ್ ಚಡ್ಡಾ,ಪ್ರೊಫೆಸರ್ ಅಶೋಕ್ ಮಿತ್ತಲ್, ಕೃಷ್ಣ ಪ್ರಾಣ್ ಆಪ್ ನಿಂದ ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿದ್ದಾರೆ.

Join Whatsapp
Exit mobile version