Home ಟಾಪ್ ಸುದ್ದಿಗಳು ರಾಜ್ಯಸಭಾ ಚುನಾವಣೆ: ಜನಾರ್ದನ ರೆಡ್ಡಿಯನ್ನು ಸಂಪರ್ಕಿಸಿದ ಕಾಂಗ್ರೆಸ್

ರಾಜ್ಯಸಭಾ ಚುನಾವಣೆ: ಜನಾರ್ದನ ರೆಡ್ಡಿಯನ್ನು ಸಂಪರ್ಕಿಸಿದ ಕಾಂಗ್ರೆಸ್

ಬೆಂಗಳೂರು: ಫೆಬ್ರವರಿ 27 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಕಾಂಗ್ರೆಸ್ ಸಂಪರ್ಕಿಸಿದೆ.

ನಮ್ಮಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ 139 ಶಾಸಕರಿದ್ದಾರೆ. ನಾನು ಅವರಿಗೆ ಮನವಿ ಮಾಡಿದ್ದೇನೆ ಎಂದು ಉಪಮುಖ್ಯಮಂತ್ರಿ ಮತ್ತು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ (ಮೇಲ್ಕೋಟೆ), ಸ್ವತಂತ್ರ ಅಭ್ಯರ್ಥಿಗಳಾದ ಲತಾ ಮಲ್ಲಿಕಾರ್ಜುನ್ (ಹರಪನಹಳ್ಳಿ) ಮತ್ತು ಕೆ ಎಚ್ ಪುಟ್ಟಸ್ವಾಮಿಗೌಡ (ಗೌರಿಬಿದನೂರು) ಅವರ ಬೆಂಬಲವನ್ನು ಕೋರಿದೆ. ಜನಾರ್ದನ ರೆಡ್ಡಿಯೂ ಕಾಂಗ್ರೆಸ್‌ಗೆ ಬೆಂಬಲ ನೀಡಲು ಒಪ್ಪಿದರೆ ಪಕ್ಷಕ್ಕೆ 139 ಮತ ಸಿಗಲಿದೆ.

ಕಾಂಗ್ರೆಸ್ ಅಜಯ್ ಮಾಕನ್, ಸೈಯದ್ ನಾಸಿರ್ ಹುಸೇನ್ ಮತ್ತು ಜಿ ಸಿ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಸಾ ಭಾಂಡಗೆ, ಎನ್‌ಡಿಎ ಪ್ರತಿನಿಧಿಸುತ್ತಿರುವ ಜೆಡಿ(ಎಸ್) ನಾಯಕ ಡಿ ಕುಪೇಂದ್ರ ರೆಡ್ಡಿ ಐದನೇ ಅಭ್ಯರ್ಥಿ.

Join Whatsapp
Exit mobile version