Home ಟಾಪ್ ಸುದ್ದಿಗಳು ಉಚ್ಛಾಟಿತ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಮಹಾರಾಣಿ ಅಮೃತಾ ರಾಯ್ ಸ್ಪರ್ಧೆ

ಉಚ್ಛಾಟಿತ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಮಹಾರಾಣಿ ಅಮೃತಾ ರಾಯ್ ಸ್ಪರ್ಧೆ

ನವದೆಹಲಿ: ಉಚ್ಛಾಟಿತ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಸ್ಥಳೀಯ ನಾಡಿಯಾ ಮನೆತನದ ಮಹಾರಾಣಿ ಅಮೃತಾ ರಾಯ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.


ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕಲ್ಯಾಣ್ ಚೌಬೆ ವಿರುದ್ಧ ಭರ್ಜರಿ ಜಯ ಸಾಧಿಸಿದ ಬಳಿಕ ಮಹುವಾ ಮೊಯಿತ್ರಾ ಸದನದ ಒಳಗೆ ಮತ್ತು ಹೊರಗೆ ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದ್ದರು. ಕಳೆದ ವರ್ಷ ಬಿಜೆಪಿಯ ನಿಶಿಕಾಂತ್ ದುಬೆ ಎಂಬ ಸಂಸದ ಮಹುವಾ ಅವರ ಮೇಲೆ ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಉದ್ಯಮಿಯಿಂದ ಲಂಚ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ ಬಳಿಕ ಅವರ ಚರಿಷ್ಮಾ ಕುಸಿದು ಸಂಸದೆಯಾಗಿ ಅನರ್ಹಗೊಂಡಿದ್ದರು.

ಇದೀಗ ಟಿಎಂಸಿಯು ಮಹುವಾ ಅವರ ವಿಷಯದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ ಎನ್ನುತ್ತಾ ಪ್ರಚಾರ ಕೈಗೊಳ್ಳುತ್ತಿದ್ದರೆ ಬಿಜೆಪಿಯು ಮಹಾರಾಣಿಯನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಅಖಾಡವನ್ನು ಮತ್ತಷ್ಟು ರಂಗೇರಿಸಿದೆ.

Join Whatsapp
Exit mobile version