Home ಕ್ರೀಡೆ ಯುಎಸ್‌ ಓಪನ್‌ ಪುರುಷರ ಡಬಲ್ಸ್‌| ರಾಜೀವ್ ರಾಮ್‌- ಸಲಿಸ್ಬರಿ ಜೋಡಿ ಚಾಂಪಿಯನ್‌

ಯುಎಸ್‌ ಓಪನ್‌ ಪುರುಷರ ಡಬಲ್ಸ್‌| ರಾಜೀವ್ ರಾಮ್‌- ಸಲಿಸ್ಬರಿ ಜೋಡಿ ಚಾಂಪಿಯನ್‌

ನ್ಯೂಯಾರ್ಕ್‌: ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ, ಅಮೆರಿಕದ ರಾಜೀವ್ ರಾಮ್ ಮತ್ತು ಬ್ರಿಟನ್ ಜೋ ಸಲಿಸ್ಬರಿ ಸತತ ಎರಡನೇ ವರ್ಷವೂ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.

ಆರ್ಥರ್‌ ಆ್ಯಶೆ ಕ್ರೀಡಾಂಗಣದಲ್ಲಿ ನಡೆದ ಪುರುಷರ ಡಬಲ್ಸ್ ಫೈನಲ್‌ ಹೋರಾಟದಲ್ಲಿ ರಾಜೀವ್‌-ಜೋ ಜೋಡಿ, ಡಚ್‌ನ ವೆಸ್ಲಿ ಕೂಹ್ಲೋಫ್ ಮತ್ತು ಸಾಲಿಸ್‌ಬರಿಯ ನೀಲ್ ಸ್ಕುಪ್ಸ್ಕಿ ವಿರುದ್ಧ 7-6 (4), 7-5 ಅಂತರದಲ್ಲಿ ನೇರ ಸೆಟ್‌ಗಳಿಂದ ಗೆದ್ದು, ಚಾಂಪಿಯನ್‌ ಪಟ್ಟವನ್ನು ಉಳಿಸಿಕೊಂಡರು.  ಇದಕ್ಕೂ ಮೊದಲು 1995-96ರಲ್ಲಿ ವುಡ್‌ಬ್ರಿಡ್ಜ್/ವುಡ್‌ಫೋರ್ಡ್ ಜೋಡಿ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿಸತತ ಎರಡು ವರ್ಷ ಚಾಂಪಿಯನ್‌ ಆಗಿದ್ದರು.  

ಸೆಮಿಫೈನಲ್‌ ಮುಖಾಮುಖಿ

ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಐದನೇ ಶ್ರೇಯಾಂಕದ ನಾರ್ವೆ ದೇಶದ ರುಡ್ ಮತ್ತು 27 ನೇ ಶ್ರೇಯಾಂಕದ ರಷ್ಯಾದ ಖಚಾನೋವ್, ಆರ್ಥರ್‌ ಆ್ಯಶೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದಾರೆ. ಎರಡನೇ ಸೆಮಿಫೈನಲ್‌ನಲ್ಲಿ ಅಮೆರಿಕದ ಫ್ರಾನ್ಸಿಸ್ ಟಿಯಾಫೋ ಮತ್ತು ಸ್ಪೇನ್‌ನ ಯುವ ಆಟಗಾರ ಕಾರ್ಲೊಸ್‌ ಅಲ್ಕರಾಜ್‌ ಪರಸ್ಪರ ಎದುರಾಗಲಿದ್ದಾರೆ.

Join Whatsapp
Exit mobile version