ಜೈಪುರ: ಆ್ಯಸಿಡ್ ಟ್ಯಾಂಕ್ ಗೆ ಸಿಡಿಲು ಬಡಿದ ಪರಿಣಾಮ ಟ್ಯಾಂಕ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಸಜೀವ ದಹನವಾಗಿದ್ದು, ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಚಿತ್ತೋರ್ ಗಢ್ ಜಿಲ್ಲೆಯ ಹಿಂದೂಸ್ತಾನ್ ಝಿಂಕ್ ಸ್ಥಾವರದಲ್ಲಿ ನಡೆದಿದೆ.
ಹಿಂದೂಸ್ತಾನ್ ಝಿಂಕ್ ನ ಜಲವಿದ್ಯುತ್ ಸ್ಥಾವರದ ಟ್ಯಾಂಕ್ ಗೆ ಸಿಡಿಲು ಬಡಿದು ಆಸಿಡ್ ಸೋರಿಕೆಯಿಂದಾಗಿ ಸ್ಥಳದಲ್ಲಿದ್ದ 10 ಉದ್ಯೋಗಿಗಳು ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೈಲಾಶ್ ಸಿಂಗ್ ಸಂಧು ತಿಳಿಸಿದ್ದಾರೆ.
ಗಾಯಗೊಂಡ ನೌಕರರನ್ನು ತಕ್ಷಣವೇ ಚಿತ್ತೋರ್ ಗಢದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.