Home ಟಾಪ್ ಸುದ್ದಿಗಳು ರಾಜಸ್ಥಾನ | RSS ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ನೌಕರರ ಮೇಲಿದ್ದ ನಿರ್ಬಂಧ ತೆರವು

ರಾಜಸ್ಥಾನ | RSS ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ನೌಕರರ ಮೇಲಿದ್ದ ನಿರ್ಬಂಧ ತೆರವು

ಜೈಪುರ: RSS ಸಂಘದ ಕಾರ್ಯಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳಲು ಇದ್ದ ನಿಷೇಧವನ್ನು ಬಿಜೆಪಿ ಆಡಳಿತದ ರಾಜಸ್ಥಾನ ಸರ್ಕಾರ ಶನಿವಾರ ತೆರವುಗೊಳಿಸಿದೆ.


ಆ ಮೂಲಕ ಸರ್ಕಾರಿ ನೌಕರರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಲು ಇದ್ದ 52 ವರ್ಷಗಳ ನಿಷೇಧವನ್ನು ರಾಜಸ್ಥಾನ ರದ್ದುಪಡಿಸಿದೆ.


ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ, 1972 ಹಾಗೂ 1981ರ ಸೂಚನೆಗಳನ್ನು ಪುನರ್ ಪರಿಶೀಲಿಸಿರುವ ಅಲ್ಲಿನ ಸರ್ಕಾರ, ನಿಷೇಧಿತ ಸಂಘಟನೆಗಳ ಪಟ್ಟಿಯಿಂದ ಆರ್ ಎಸ್ ಎಸ್ ಅನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.


ಇದಕ್ಕೂ ಪೂರ್ವದಲ್ಲಿ ಆರ್ಎಸ್ಎಸ್ ಕುರಿತಾಗಿ ಇದೇ ಮಾದರಿಯ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಹರಿಯಾಣ, ಹಿಮಾಚಲಪ್ರದೇಶ, ಮಧ್ಯಪ್ರದೇಶ ಹಾಗೂ ಛತ್ತೀಸಗಢ ಸರ್ಕಾರಗಳು ಆರ್ ಎಸ್ ಎಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸರ್ಕಾರಿ ನೌಕರರಿಗೆ ಇದ್ದ ನಿರ್ಬಂಧವನ್ನು ಈಗಾಗಲೇ ತೆಗೆದುಹಾಕಿವೆ.

Join Whatsapp
Exit mobile version