Home ಟಾಪ್ ಸುದ್ದಿಗಳು ರಾಜಸ್ತಾನ: ಮತ್ತೋರ್ವ ದಲಿತ ಬಾಲಕನಿಗೆ ಶಿಕ್ಷಕನಿಂದ ಥಳಿತ; ಆಸ್ಪತ್ರೆಗೆ ದಾಖಲು

ರಾಜಸ್ತಾನ: ಮತ್ತೋರ್ವ ದಲಿತ ಬಾಲಕನಿಗೆ ಶಿಕ್ಷಕನಿಂದ ಥಳಿತ; ಆಸ್ಪತ್ರೆಗೆ ದಾಖಲು

ರಾಜಸ್ತಾನ: ಶಿಕ್ಷಕನಿಂದ ಹಲ್ಲೆಗೊಳಗಾಗಿ ದಲಿತ ಬಾಲಕನೋರ್ವ ಮೃತಪಟ್ಟ ಘಟನೆಯ ಕೆಲ ದಿನಗಳ ಬಳಿಕ ರಾಜ್ಯದ ಬಾರ್ಮರ್ ಎಂಬಲ್ಲಿ ಅದೇ ರೀತಿಯ ಮತ್ತೊಂದು ಘಟನೆ ನಡೆದಿದ್ದು, ಶಿಕ್ಷಕನಿಂದ ಥಳಿತಕ್ಕೊಳಗಾದ ಬಾಲಕ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಏಳನೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕ ಪರೀಕ್ಷೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ಬರೆಯದೇ ಬಿಟ್ಟಿದ್ದು, ಇದಕ್ಕೆ ಶಿಕ್ಷಕ ಆತನಿಗೆ ಥಳಿಸಿದ್ದಲ್ಲದೇ, ತಲೆಯನ್ನು ಹಿಡಿದು ಗೋಡೆಗೆ ಬಡಿದಿದ್ದರು ಎಂದು ಅದೇ ತರಗತಿಯಲ್ಲಿ ಕಲಿಯುತ್ತಿದ್ದ ಬಾಲಕನ ಸಹೋದರ ತಿಳಿಸಿದ್ದಾನೆ.

ತಲೆಯಲ್ಲಿನ ಗಾಯಗಳೊಂದಿಗೆ ಬಾಲಕ ಮನೆಗೆ ಮರಳಿದ್ದು, ಬಳಿಕ ಪ್ರಜ್ಞಾಹೀನನಾದ ಬಾಲಕನನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಶಿಕ್ಷಕ ಅಶೋಕ್ ಮಾಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಇಲಾಖೆ ಮತ್ತು ಶಿಕ್ಷಣೆ ಇಲಾಖೆ ಈ‌ ಕುರಿತಂತೆ ತನಿಖೆ ನಡೆಸುತ್ತಿದೆ.

Join Whatsapp
Exit mobile version