ರಾಜಮೌಳಿ ನಿರ್ದೇಶನದ ‘RRR’ ಪ್ರದರ್ಶಿಸಿದರೆ ಚಿತ್ರ ಮಂದಿರಕ್ಕೆ ಬೆಂಕಿ | ಬಿಜೆಪಿ ರಾಜ್ಯಾಧ್ಯಕ್ಷನ ಬೆದರಿಕೆ

Prasthutha|

ಹೈದರಾಬಾದ್ : ದೊಡ್ಡ ಬಜೆಟ್ ಸಿನೆಮಾಗಳಿಗೆ ಖ್ಯಾತರಾಗಿರುವ ತೆಲುಗು ಚಿತ್ರ ನಿರ್ದೇಶಕ ಚಂದ್ರಮೌಳಿ ನಿರ್ದೇಶನದ, ಜೂನಿಯರ್ ಎನ್ ಟಿಆರ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ರೌದ್ರಂ ರಣಂ ರುದ್ರಂ (RRR)’ ಚಿತ್ರ ಈಗ ಬಿಜೆಪಿಗರಿಂದ ರಾಜಕೀಯಗೊಳಿಸಲ್ಪಟ್ಟಿದೆ. ಈ ಚಿತ್ರವನ್ನು ಪ್ರದರ್ಶಿಸಿದರೆ ಚಿತ್ರ ಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಬಂಡಿ ಸಂಜಯ್ ಕುಮಾರ್ ಬೆದರಿಕೆಯೊಡ್ಡಿದ್ದಾರೆ.

RRR ಚಿತ್ರದ ಟೀಸರ್ ಇತ್ತಿಚೆಗೆ ಬಿಡುಗಡೆಗೊಂಡು ಭಾರೀ ಕುತೂಹಲವನ್ನುಂಟು ಹುಟ್ಟು ಹಾಕಿದೆ, ಜೂನಿಯರ್ ಎನ್ ಟಿಆರ್ ಆದಿವಾಸಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೀಸರ್ ನ ಒಂದು ಭಾಗದಲ್ಲಿ ಅವರು ಮುಸ್ಲಿಂ ವೇಷಭೂಷಣದಲ್ಲಿ ಕಾಣಿಸಿಕೊಂಡಿರುವುದು ಬಿಜೆಪಿಗರಿಗೆ ಹೊಟ್ಟೆ ಉರಿ ಆಗಿದ್ದು, ಚಿತ್ರದ ಬಿಡುಗಡೆ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ.

- Advertisement -

ಚಿತ್ರ ಪ್ರದರ್ಶನ ಮಾಡಿದರೆ ಚಿತ್ರ ಮಂದಿರಗಳಿಗೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿರುವುದಲ್ಲದೆ, ಚಂದ್ರಮೌಳಿ ಮೇಲೆ ಹಲ್ಲೆ ನಡೆಸುವುದಾಗಿಯೂ ಸಂಜಯ್ ಕುಮಾರ್ ಬೆದರಿಕೆ ಹಾಕಿದ್ದಾರೆ.

ಜೂನಿಯರ್ ಎನ್ ಟಿಆರ್ ಈ ಚಿತ್ರದಲ್ಲಿ ಆದಿವಾಸಿ ನಾಯಕ ಕೋಮರಾಮ್ ಭೀಮ್ ಅವರ ಪಾತ್ರದಾರಿಯಾಗಿ ನಟಿಸಲಿದ್ದಾರೆ. ಚಿತ್ರದ ಟೀಸರ್ ನಲ್ಲಿ ಜೂನಿಯರ್ ಎನ್ ಟಿಆರ್ ಅವರು ಸುರ್ಮಾ, ತಾಯತ, ಮತ್ತು ತಲೆಗೆ ಟೋಪಿ ಧರಿಸಿರುವುದು ಚಿತ್ರ ರಸಿಕರಲ್ಲಿ ಹೆಚ್ಚಿನ ಕುತೂಹಲ ಮೂಡಿದೆ. ಆದರೆ ಇದು ಬಿಜೆಪಿಗರಿಗೆ ಹೊಟ್ಟೆ ಉರಿಗೆ ಕಾರಣವಾಗಿದೆ.  

- Advertisement -