Home ಟಾಪ್ ಸುದ್ದಿಗಳು ಜನಸಂಖ್ಯಾ ನಿಯಂತ್ರಣಕ್ಕಾಗಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿ: ರಾಜ್ ಠಾಕ್ರೆ ಆಗ್ರಹ

ಜನಸಂಖ್ಯಾ ನಿಯಂತ್ರಣಕ್ಕಾಗಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿ: ರಾಜ್ ಠಾಕ್ರೆ ಆಗ್ರಹ

ಪುಣೆ: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಸಮಾನ ನಾಗರಿಕ ಸಂಹಿತೆ ಕಾಯ್ದೆಯನ್ನು ಜಾರಿಗೆ ತರುವಂತೆ MNS ಮುಖ್ಯಸ್ಥ ರಾಜ್ ಠಾಕ್ರೆ ಭಾನುವಾರು ಪ್ರಧಾನಿ ಮೋದಿಯನ್ನು ಆಗ್ರಹಿಸಿದ್ದಾರೆ.

ಪುಣೆಯಲ್ಲಿ ನಡೆದ ಸಾರ್ವಜನಿಕ ರ್ಯಾವಲಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಶೀಘ್ರದಲ್ಲೆ ಸಮಾನ ನಾಗರಿಕ ಸಂಹಿತೆ ಮತ್ತು ಜನಸಂಖ್ಯೆ ನಿಯಂತ್ರಣಕ್ಕಾಗಿ ನೂತನ ಕಾಯ್ದೆಯನ್ನು ಜಾರಿಗೆ ತರಬೇಕು. ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿನಗರ ಎಂದು ಬದಲಾಯಿಸುವಂತೆ ಅವರು ಆಗ್ರಹಿಸಿದ್ದಾರೆ.

ಮಸೀದಿಯಲ್ಲಿನ ಧ್ವನಿವರ್ಧಕದ ಮೂಲಕ ಆಝಾನ್ ಗೆ ಬದಲಾಗಿ ಹನುಮಾನ್ ಚಾಲೀಸಾ ಪಠಿಸಲು ನಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದೆ. ಈ ಮಧ್ಯೆ ಸಂಸದೆ ನವನೀತ್ ಮತ್ತು ಶಾಸಕ ರವಿ ದಂಪತಿ ಮಹಾರಾಷ್ಟ್ರ ಸಿಎಮ್ ನಿವಾಸದ ಮುಂದೆ ಹನುಮಾನ್ ಪಠಿಸುವುದಾಗಿ ಘೋಷಿಸಿದ ಕಾರಣಕ್ಕಾಗಿ ಅವರನ್ನು ಬಂಧಿಸಿತ್ತು. ಸಿಎಂ ನಿವಾಸ ಮಾತೋಶ್ರೀ ಎದುರು ಹನುಮಾನ್ ಚಾಲೀಸಾ ಪಠಿಸುವುದರಲ್ಲಿ ತಪ್ಪೇನಿದೆ. ಸಿಎಂ ನಿವಾಸ ಮಸೀದಿಯೇ ಎಂದು ರಾಜ್ ಠಾಕ್ರೆ ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಮಧ್ಯೆ ರಾಜ್ ಠಾಕ್ರೆ ಹಾಗೂ ರ್ಯಾೆಲಿಯ ಸಂಘಟಕರ ವಿರುದ್ಧ ಔರಂಗಾಬಾದ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Join Whatsapp
Exit mobile version