Home ಕ್ರೀಡೆ ಚೆನ್ನೈ: ನ್ಯೂಜಿಲೆಂಡ್‌ ʻಎʼ ವಿರುದ್ಧ ಸಂಜು ಸ್ಯಾಮ್ಸನ್‌ ಬಳಗ ಕ್ಲೀನ್‌ ಸ್ವೀಪ್‌ ಸಾಧನೆ

ಚೆನ್ನೈ: ನ್ಯೂಜಿಲೆಂಡ್‌ ʻಎʼ ವಿರುದ್ಧ ಸಂಜು ಸ್ಯಾಮ್ಸನ್‌ ಬಳಗ ಕ್ಲೀನ್‌ ಸ್ವೀಪ್‌ ಸಾಧನೆ

ಚೆನ್ನೈನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್‌ ʻಎʼ ತಂಡವನ್ನು ಮಣಸಿದ ಭಾರತ ʻಎʼ ತಂಡ, ಮೂರು ಪಂದ್ಯಗಳ ಸರಣಿಯಲ್ಲಿ ʻಕ್ಲೀನ್‌ ಸ್ವೀಪ್‌ʼ ಸಾಧನೆ ಮಾಡಿದೆ.

ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ್ದ ಸಂಜು ಸ್ಯಾಮ್ಸನ್ ಸಾರಥ್ಯದ ಭಾರತ ‘ಎ’ 49.3 ಓವರ್‌ಗಳಲ್ಲಿ 284 ರನ್‌ಗಳಿಗೆ ಆಲೌಟ್‌ ಆಗಿತ್ತು. ಸಾಮಾನ್ಯ ಸವಾಲನ್ನು ಬೆನ್ನಟ್ಟುವ ವೇಳೆ ರಾಜ್ ಅಂಗದ್ ಬಾವಾ ದಾಳಿಗೆ ಕುಸಿದ ಪ್ರವಾಸಿ ಪಡೆ 38.3 ಓವರ್‌ಗಳಲ್ಲಿ 178 ರನ್‌ಗಳಿಗೆ ಆಲೌಟ್‌ ಆಯಿತು.  ಆ ಮೂಲಕ ಭಾರತ ,106 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು.

ಅಮೋಘ ಬೌಲಿಂಗ್‌ ದಾಳಿ ಸಂಘಟಿಸಿದ ವೇಗಿ ರಾಜ್ ಬಾವಾ, 5.3 ಓವರ್‌ ಎಸೆದು ಕೇವಲ 11ರನ್‌  ನೀಡಿ 4 ವಿಕೆಟ್‌ ಪಡೆದರು.  ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ರಾಹುಲ್‌ ಚಾಹರ್‌ ತಲಾ  2 ವಿಕೆಟ್‌ ಪಡೆದರು.

ಕೀವಿಸ್‌ ಪರ ಏಕಾಂಗಿ ಹೋರಾಟ ನಡೆಸಿದ ಆರಂಭಿಕ ಡ್ಯಾನಿ ಕ್ಲೀವರ್‌ 83 ರನ್‌ಗಳಿಸಿ, ರಿಷಿ ಧವನ್‌ಗೆ ವಿಕೆಟ್‌ ಒಪ್ಪಿಸಿದರು. 33ನೇ ಓವರ್‌ವರೆಗೂ ಕ್ರೀಸ್‌ನಲ್ಲಿದ್ದ ಕ್ಲೀವರ್‌, 89 ಎಸೆಗಳನ್ನು ಎದರಿಸಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 83 ರನ್‌ಗಳಿಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡುವಲ್ಲಿ ವಿಫಲರಾದರು. 6 ಮಂದಿ ಎರಡಂಕಿಯ ಮೊತ್ತವನ್ನೇ ದಾಟಲಿಲ್ಲ. ಮೈಕಲ್‌ ರಿಪ್ಪನ್‌ 29 ರನ್‌ಗಳಿಸಿದರೆ, ಆರಂಭಿಕ ಚಡ್‌ ಬೌಸ್‌  20 ರನ್‌ಗಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್‌ ನಡೆಸಿದ್ದ ಭಾರತ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಹಾಗೂ ಶಾರ್ದೂಲ್ ಠಾಕೂರ್ ಗಳಿಸಿದ ಅರ್ಧಶತಕಗಳ ನೆರವಿನಿಂದ 284 ರನ್‌ಳಿಸಿತ್ತು.

Join Whatsapp
Exit mobile version