ರಾಮನಗರ: ಪಾಕಿಸ್ತಾನ ಪರವಾಗಿ ವಾದ ಮಾಡುವುದು ದೇಶದ್ರೋಹ ಮತ್ತು ಅವರ ಪರ ವಾದಿಸುವವರು ದೇಶದ್ರೋಹಿಗಳು. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಮೂವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ವಾಸ ಮಾಡುವ ಪ್ರತಿಯೊಬ್ಬರು ನಮ್ಮ ದೇಶದ ಪರವಾಗಿರಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಗೌರವಿಸಬೇಕು ಎಂದರು. ಯಾರೂ ಸ್ಪರ್ಧೆ ಮಾಡ್ತಾರೆಂಬುದು ಸಹ ನನಗೆ ಮುಖ್ಯವಲ್ಲ. ನನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದೇನೆ ಎಂದು ತಿಳಿಸಿದರು.