Home ಟಾಪ್ ಸುದ್ದಿಗಳು ಮಳೆ ಹಿನ್ನೆಲೆ: ಮಕ್ಕಳಿಗೆ ರಜೆ ಕೊಡಲು ಮುಖ್ಯೋಪಾದ್ಯಾಯರಿಗೆ ಅಧಿಕಾರ

ಮಳೆ ಹಿನ್ನೆಲೆ: ಮಕ್ಕಳಿಗೆ ರಜೆ ಕೊಡಲು ಮುಖ್ಯೋಪಾದ್ಯಾಯರಿಗೆ ಅಧಿಕಾರ

ಬೆಂಗಳೂರು : ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಸುಗಮವಾಗಿ ಶಾಲೆಗೆ ಬಂದು ಹೋಗಲು ಸಾಧ್ಯವಾಗುತ್ತಿಲ್ಲ. ಅಂತಹ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಮುಖ್ಯೋಪಾದ್ಯಾಯರು ಅಧಿಕಾರಿಗಳ ಸಹಮತದೊಂದಿಗೆ ರಜೆ ಘೋಷಣೆ ಮಾಡಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಂದ ಮಕ್ಕಳನ್ನು ದೂರ ಇರಿಸಬೇಕು. ಆಂತಕ ಕಟ್ಟಡಗಳು ಕುಸಿಯುವ ಸಾಧ್ಯತೆ ಇರುವುದರಿಂದ ಅಲ್ಲಿ ತರಗತಿ ನಡೆಸುವುದಾಗಲಿ, ಅಲ್ಲಿರುವ ಶೌಚಾಲಯ ಬಳಸುವುದಾಗಲಿ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ.


Join Whatsapp
Exit mobile version