ಲಾಹೋರ್: ಮೊಸರು ಖರೀದಿಸಲು ರೈಲನ್ನು ನಿಲ್ಲಿಸಿದ್ದಕ್ಕಾಗಿ ಲೋಕೋ ಪೈಲಟ್ ಮತ್ತು ಸಹಾಯಕನನ್ನು ಪಾಕಿಸ್ತಾನ ರೈಲ್ವೆ ಸಚಿವಾಲಯ ಅಮಾನತುಗೊಳಿಸಿದೆ.
ರೈಲ್ವೆ ಸಚಿವಾಲಯದ ಉಸ್ತುವಾರಿ ಅಝಮ್ ಖಾನ್ ಸ್ವಾತಿ ಲೊಕೊ ಪೈಲಟ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಲೋಕೋ ಪೈಲಟ್ ರಾಣಾ ಮೊಹಮ್ಮದ್ ಶೆಹಝಾದ್ ಮತ್ತು ಅವರ ಸಹಾಯಕ ಇಫ್ತಿಕಾರ್ ಹುಸೇನ್ ನನ್ನು ಪಾಕಿಸ್ತಾನ ರೈಲ್ವೇಸ್ ನ ಲಾಹೋರ್ ಎಡ್ಮಿನಿಸ್ಟ್ರೇಷನ್ ಅಮಾನತುಗೊಳಿಸಿದೆ.
ಲೋಕೋ ಪೈಲಟ್ ರೈಲನ್ನು ನಿಲ್ಲಿಸಿ ಮೊಸರು ಖರೀದಿಸಲು ಹತ್ತಿರದ ಅಂಗಡಿಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವೀಡಿಯೋ ವೈರಲಾಗುತ್ತಿದ್ದಂತೆಯೇ ರೈಲ್ವೇ ಸಚಿವಾಲಯದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು.