ಅಕ್ರಮ ಕ್ಲಿನಿಕ್’ಗಳ ಮೇಲೆ ದಾಳಿ, ಪರಿಶೀಲನೆ

Prasthutha|

ಬೆಂಗಳೂರು: ಅಕ್ರಮ ಕ್ಲಿನಿಕ್’ಗಳ ಮೇಲೆ ನೆಲಮಂಗಲ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರವಾನಗಿ ಇಲ್ಲದ ಕ್ಲಿನಿಕ್’ಗಳನ್ನು ಬಂದ್ ಮಾಡಿದ್ದಾರೆ. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನ 5ಕ್ಕೂ ಹೆಚ್ಚು ಕ್ಲಿನಿಕ್’ಗಳ ಮೇಲೆ ತಾಲೂಕು ವೈದ್ಯಾಧಿಕಾರಿ ಹೇಮಲತಾ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

- Advertisement -


ಪರವಾನಗಿ ಇಲ್ಲದ, ನವೀಕರಣಗೊಳ್ಳದ ಕ್ಲಿನಿಕ್’ಗಳಿಗೆ ಬೀಗ ಹಾಕಲಾಗಿದೆ. ಸೂಕ್ತ ದಾಖಲೆಗಳಿಲ್ಲದೇ ಕ್ಲಿನಿಕ್’ಗಳ ಬಾಗಿಲು ಮುಚ್ಚಲು ಸೂಚನೆ ನೀಡಲಾಗಿದೆ. ಕೆಪಿಎಂಇ ಆಕ್ಟ್ ಅಡಿ ನೋಂದಣಿ ಮಾಡಿಕೊಳ್ಳದ ಕ್ಲಿನಿಕ್’ಗಳಿಗೆ ನೋಟಿಸ್ ನೀಡಲಾಗಿದೆ.


ಇಲ್ಲಿನ ಅಶ್ವಿನಿ ಕ್ಲಿನಿಕ್, ಶ್ರೀ ಗಣೇಶ ಮತ್ತು ಗಣೇಶ ಕ್ಲಿನಿಕ್, ವಿನಾಯಕ ಡಯಾಗ್ನೋಸ್ಟಿಕ್ ಲ್ಯಾಬ್, ಎಸ್’ಎಲ್’ವಿ ಲ್ಯಾಬ್’ನ ಕ್ಲಿನಿಕ್’ಗಳಿಗೆ ದಾಳಿ ಮಾಡಲಾಗಿದೆ. ಕೆಪಿಎಂಇ ನೋಂದಣಿಯಿಲ್ಲದೆ ಯಾರೇ ಕ್ಲಿನಿಕ್ ನಡೆಸಿದರೂ ಅಂತಹವರ ವಿರುದ್ಧ ಕ್ರಮ ಕೈಗೊಳ್ಳೊದಾಗಿ ಟಿಎಚ್’ಓ ಹೇಮಲತಾ ತಿಳಿಸಿದ್ದಾರೆ.

Join Whatsapp