Home ಟಾಪ್ ಸುದ್ದಿಗಳು ಲಸಿಕೆಯ ಬದಲು ಸರ್ಕಾರ ಮಾತಿನಲ್ಲೇ ಗೋಪುರ ಕಟ್ಟುತ್ತಿದೆ: ರಾಹುಲ್ ವ್ಯಂಗ್ಯ

ಲಸಿಕೆಯ ಬದಲು ಸರ್ಕಾರ ಮಾತಿನಲ್ಲೇ ಗೋಪುರ ಕಟ್ಟುತ್ತಿದೆ: ರಾಹುಲ್ ವ್ಯಂಗ್ಯ

ನವದೆಹಲಿ : ದೇಶಾದ್ಯಂತ ವ್ಯಾಪಕವಾಗಿದ್ದ ಮಹಾಮಾರಿ ಕೊರೋನ 3 ನೇ ಅಲೆ ಅಪ್ಪಳಿಸುವ ಸಾಧ್ಯತೆಯನ್ನು ಅರೋಗ್ಯ ಇಲಾಖೆ ಎಚ್ಚರಿಸುತ್ತಿರುವ ನಡುವೆಯೇ ಬುಧವಾರ ಹಲವಾರು ರಾಜ್ಯದಲ್ಲಿ ಕೋವಿಡ್ – 19 ಲಸಿಕೆ ಕೊರತೆಯಿದೆಯೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತನ್ನ ಟ್ವಿಟ್ಟರ್ ಖಾತೆಯಲ್ಲಿ ರಾಹುಲ್ “ಜುಮ್ಲಾ ಹೈ, ಲಸಿಕೆ ನಹಿ (ವಾಕ್ಚಾತುರ್ಯವಿದೆ, ಲಸಿಕೆ ಇಲ್ಲ)” ಎಂದು ಹಿಂದಿಯಲ್ಲಿ “ವೇರ್ ಈಸ್ ವ್ಯಾಕ್ಸಿನ್ ” ಎಂಬ ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಈ ಕುರಿತು ಮಾತನಾಡಲು ಕೇಂದ್ರ ನಿರಾಕರಿಸಿದೆ.

ಮಾತ್ರವಲ್ಲದೆ ದೆಹಲಿ ಮತ್ತು ಒರಿಸ್ಸಾ ರಾಜ್ಯದಲ್ಲಿನ ಲಸಿಕೆ ಕೊರತೆಯ ವರದಿ ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ಪಿ.ಚಿದಂಬರಮ್ ಮಂಗಳವಾರ 2021 ರ ಡಿಸೆಂಬರ್ ವೇಳೆಗೆ ಇಡೀ ವಯಸ್ಕ ಜನಸಂಖ್ಯೆಗೆ ಲಸಿಕೆ ಹಾಕುವುದು ಖಾಲಿ ಹೆಗ್ಗಳಿಕೆ ” ಯಾಗಿ ಮಾತ್ರ ಉಳಿಯಲಿದೆಯೆಂದು ಸರ್ಕಾರದ ವೈಫಲ್ಯವನ್ನು ಬೊಟ್ಟುಮಾಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಯವರಿಂದ ಈ ಹೇಳಿಕೆ ಹೊರಬಿದ್ದಿದೆ.

ಲಸಿಕೆಗಳ ಉತ್ಪಾದನೆಯನ್ನು ಕ್ರಮೇಣ ಹೆಚ್ಚಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುತ್ತದೆ ”ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಅವರು ಕಳೆದ ವಾರ ಲಸಿಕೆ ಕೊರತೆಯನ್ನು ಎದುರಿಸುತ್ತಿರುವ ರಾಜ್ಯಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದರು.


ಈ ನಿಟ್ಟಿನಲ್ಲಿ ಕೇಂದ್ರದ ವಿರುದ್ದ ಗುಡುಗಿದ್ದ ಪಿ. ಚಿದಂಬರಮ್ ಅವರು “ಹೊಸ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ವ್ಯಾಕ್ಸಿನೇಷನ್ ಕಾರ್ಯಕ್ರಮದ ಬಗ್ಗೆ ರಾಷ್ಟ್ರಕ್ಕೆ ಸತ್ಯವನ್ನು ಹೇಳುತ್ತಾರೆಯೇ?”. ಮಂತ್ರಿಗಳ ಸಂಖ್ಯೆ ಹೆಚ್ಚುತ್ತಿದೆ (ಹೊಸ ಕೇಂದ್ರ ಸಚಿವ ಸಂಪುಟದಲ್ಲಿ) ಆದರೆ ದೇಶದಲ್ಲಿ ಕೋವಿಡ್ -19 ಲಸಿಕೆ ದಾಸ್ತಾನು ಇಲ್ಲ ಎಂದು ಟೀಕಿಸಿದ್ದರು. ಮಾತ್ರವಲ್ಲದೆ ಕಮ್ಯುನಿಸ್ಟ್ ನಾಯಕ ಸಿತಾರಾಮ್ ಯಚೂರಿ ಕೂಡ ಲಸಿಕೆ ಕೊರತೆಯ ವಿರುದ್ಧ ದ್ವನಿಯೆತ್ತಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ರಾಹುಲ್ ರವರ ಈ ಟ್ವೀಟ್ ಮಹತ್ವ ಪಡೆದಿದೆ.

Join Whatsapp
Exit mobile version