ಮುಂಬೈ : ಶಿವಸೇನಾ ಸಂಸದ ರಾಹುಲ್ ಶೇವಳೆ ಅವರನ್ನು ಸಂಸತ್ ನಲ್ಲಿ ಪಕ್ಷದ ನಾಯಕರನ್ನಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೇಮಕ ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಸೇರಿದಂತೆ ಲೋಕಸಭೆಯಲ್ಲಿ ಶಿವಸೇನೆಯ 19 ಸಂಸದರಲ್ಲಿ (ಸಂಸದರು) 12 ಮಂದಿ ಬದಲಾವಣೆಗಾಗಿ ಸ್ಪೀಕರ್ ಗೆ ಮನವಿ ಮಾಡಿದ್ದರಿಂದ ಲೋಕಸಭೆಯ ಕಾರ್ಯಾಲಯದಿಂದ ಮಂಗಳವಾರ ರಾತ್ರಿ ಈ ಕುರಿತ ಅಧಿಸೂಚನೆ ಹೊರಡಿಸಲಾಗಿದೆ.
ಅದಕ್ಕೂ ಮುನ್ನ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಲೋಕಸಭೆಯಲ್ಲಿ ಶಿವಸೇನಾ ನಾಯಕರಾಗಿ ರಾಹುಲ್ ಅವರನ್ನು ನೇಮಕ ಮಾಡಿದ್ದರು. ಏತನ್ಮಧ್ಯೆ, ಭಾವನಾ ಗವಾಲಿ ಅವರನ್ನು ಮುಖ್ಯ ಸಚೇತಕರಾಗಿ ಉಳಿಸಿಕೊಳ್ಳಲಾಗಿದೆ.