Home ಟಾಪ್ ಸುದ್ದಿಗಳು ರೂಪಾಂತರ ಕೋವಿಡ್ ಗಂಭೀರ ಬೆದರಿಕೆ: ರಾಹುಲ್ ಗಾಂಧಿ ಎಚ್ಚರಿಕೆ

ರೂಪಾಂತರ ಕೋವಿಡ್ ಗಂಭೀರ ಬೆದರಿಕೆ: ರಾಹುಲ್ ಗಾಂಧಿ ಎಚ್ಚರಿಕೆ

ನವದೆಹಲಿ: ರೂಪಾಂತರ ಕೋವಿಡ್ ವೈರಸ್ ನ ಹರಡುವಿಕೆಯು ದೇಶಕ್ಕೆ ಗಂಭೀರ ಬೆದರಿಕೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ದೇಶದ ಎಲ್ಲಾ ಪ್ರಜೆಗಳಿಗೂ ಕೋವಿಡ್ ಲಸಿಕೆ ಖಾತರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಓಮಿಕ್ರಾನ್ ಎಂಬ ರೂಪಾಂತರಿಸಿದ ಮಾರಣಾಂತಿಕ ಮತ್ತು ಅಪಾಯಕಾರಿ ವೈರಸ್ ನ ಹೊಸ ತಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಧ್ಯೆ ರಾಹುಲ್ ಗಾಂಧಿ ಈ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಪ್ರಚಾರ ಪಡಿಸುತ್ತಿರುವ ಲಸಿಕೆಯ ಸಂಖ್ಯೆಗಳ ಬಗ್ಗೆ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಲಸಿಕಾ ಕುರಿತ ಅಂಕಿಅಂಶಗಳನ್ನು ದೀರ್ಘಕಾಲ ಮರೆಮಾಚಲು ಸಾಧ್ಯವಿಲ್ಲ ಎಂದು ತಿಳಿಸಿದರು.

ದೇಶದ ಕೋವಿಡ್ ಲಸಿಕಾ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಒಳಗೊಂಡಿರುವುದು ದುರಂತ ಎಂದು ಪ್ರತಿಕ್ರಿಯಿಸಿದರು.

ಮಾತ್ರವಲ್ಲ ಕೋವಿಡ್ ಲಸಿಕಾ ಅಂಕಿಅಂಶಗಳ ಬಗ್ಗೆ ಪ್ರಧಾನಿ ಮೋದಿ ಸರ್ಕಾರ ಮತ್ತು ಬಿಜೆಪಿ ದೇಶಕ್ಕೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಅವರು ಆರೋಪಿಸಿದರು.

Join Whatsapp
Exit mobile version