ನವದೆಹಲಿ: ರಾಹುಲ್ ಗಾಂಧಿಗೆ ಇಂದೂ ಇಡಿ ವಿಚಾರಣೆಯ ಬಿಸಿ ಮುಟ್ಟಲಿದ್ದು, ಜಾರಿ ನಿರ್ದೇಶನಾಲಯ ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ತನಿಖೆ ನಡೆಸಲಿದ್ದು ಪ್ರಶ್ನೆಗಳ ಸರಣಿ ಮುಂದುವರೆಸಲಿದೆ ಎಂದು ಮಾಹಿತಿಯು ದೊರಕಿದೆ.
ಇಡಿ ನಿನ್ನೆ ಬರೋಬ್ಬರಿ 11 ಗಂಟೆ ವಿಚಾರಣೆ ಮಾಡಿದ್ದು ಮತ್ತೇ ವಿಚಾರಣೆಗೆ ಮತ್ತೆ ಬರಲು ಜಾರಿ ನಿರ್ದೇಶನಾಲಯ ಸೂಚನೆ ನೀಡಿತ್ತು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ವಿಚಾರಣೆಯಿಂದ ರಾಹುಲ್ ಹೊರಬಂದಿದ್ದು
ಸತತ 5 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.
ಬೆಳಗ್ಗೆ 11.30ರಿಂದ 2.15ರವರೆಗೆ ವಿಚಾರಣೆ ನಡೆಸಿದ್ದ ED , ಆ ಬಳಿಕ 1 ಗಂಟೆಯ ಕಾಲ ರಾಹುಲ್ ಗಾಂಧಿಯನ್ನು ಭೋಜನಕ್ಕೆ ಬಿಟ್ಟಿದ್ದರು.
ರಾತ್ರಿ 10 ಗಂಟೆ ಸುಮಾರಿಗೆ ಜಾರಿ ನಿರ್ದೇಶನಾಲಯ ವಿಚಾರಣೆ ಮುಗಿಸಿದ್ದು ವಿಚಾರಣೆ ಎದುರಿಸಿ ಮನೆಗೆ ಬಂದಿರುವ ರಾಹುಲ್ ಗಾಂಧಿ, ಮತ್ತೆ ಇಂದೂ ಹಾಜರಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ.