Home ಟಾಪ್ ಸುದ್ದಿಗಳು ರಾಹುಲ್ ಗಾಂಧಿ ಹೊಲಿದ ಚಪ್ಪಲಿಗಳಿಗೆ ಲಕ್ಷ ಲಕ್ಷ ಹಣ ಕೊಟ್ಟು ಖರೀದಿಸಲು ಮುಗಿಬಿದ್ದ ಜನ

ರಾಹುಲ್ ಗಾಂಧಿ ಹೊಲಿದ ಚಪ್ಪಲಿಗಳಿಗೆ ಲಕ್ಷ ಲಕ್ಷ ಹಣ ಕೊಟ್ಟು ಖರೀದಿಸಲು ಮುಗಿಬಿದ್ದ ಜನ

ಸುಲ್ತಾನಪುರ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸುಲ್ತಾನ್ ಪುರಕ್ಕೆ ಹೋಗಿದ್ದಾಗ ಚಮ್ಮಾರನ ಅಂಗಡಿಯಲ್ಲಿ ಹೊಲಿಗೆ ಹಾಕಿದ್ದ ಚಪ್ಪಲಿಗಳಿಗೆ ಭಾರಿ ಬೇಡಿಕೆ ಬಂದಿದೆ. ಆ ಚಪ್ಪಲಿಗಳನ್ನು ಲಕ್ಷ ಲಕ್ಷ ಹಣವನ್ನು ಕೊಟ್ಟು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ.


ರಾಹುಲ್ ಗಾಂಧಿ ತನ್ನ ಅಂಗಡಿಗೆ ಭೇಟಿ ನೀಡಿದ್ದ ವೇಳೆ ಹೊಲಿದಿದ್ದ ಚಪ್ಪಲಿಗಳನ್ನು ₹10 ಲಕ್ಷ ಕೊಟ್ಟು ಖರೀದಿಸಲು ಕೆಲವರು ಮುಂದೆ ಬಂದಿದ್ದರೂ, ಅವುಗಳನ್ನು ಮಾರಾಟ ಮಾಡುವುದಕ್ಕೆ ಇಲ್ಲಿನ ಚಮ್ಮಾರ ರಾಮ್ ಚೇತ್ ನಿರಾಕರಿಸಿದ್ದಾರೆ.


‘ರಾಹುಲ್ ಗಾಂಧಿ ಹೊಲಿದಿರುವ ಈ ಚಪ್ಪಲಿಗಳನ್ನು ನನ್ನ ಅದೃಷ್ಟದ ಪಾದರಕ್ಷೆಗಳೆಂದು ಭಾವಿಸಿ, ಅವುಗಳನ್ನು ಗಾಜಿನ ಪೆಟ್ಟಿಗೆಯಲ್ಲಿ ಜೋಪಾನವಾಗಿಡುತ್ತೇನೆ’ ಎಂದು ರಾಮ್ ಚೇತ್ ಹೇಳಿದ್ದಾರೆ.
ರಾಮ್ ಚೇತ್ ಅವರು ಈಗ ತಮ್ಮೂರಿನಲ್ಲಿ ‘ಸೆಲೆಬ್ರಿಟಿ’ ಆಗಿದ್ದಾರೆ. ಅವರ ಅಂಗಡಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದೇ ಇದಕ್ಕೆ ಕಾರಣ.
ಸುಲ್ತಾನಪುರದ ಹೊರವಲಯದ ವಿಧಾಯಕನಗರದಲ್ಲಿ ರಾಮ್ ಚೇತ್ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ಜುಲೈ 26ರಂದು ಆ ಮಾರ್ಗವಾಗಿ ತೆರಳುತ್ತಿದ್ದ ವೇಳೆ, ರಾಹುಲ್ ಗಾಂಧಿ ಅವರು ರಾಮ್ ಚೇತ್ ಅಂಗಡಿಗೆ ಭೇಟಿ ನೀಡಿ, ಅವರ ಕುಟುಂಬ ಹಾಗೂ ಕಷ್ಟಗಳ ಕುರಿತು ಮಾತನಾಡಿದ್ದರು.
ಅದೇ ವೇಳೆ, ಚಪ್ಪಲಿಯನ್ನು ಹೊಲಿದಿದ್ದ ರಾಹುಲ್ ಗಾಂಧಿ, ಶೂ ಕೂಡ ಸಿದ್ಧಪಡಿಸಿದ್ದರು.


‘ರಾಹುಲ್ ಗಾಂಧಿ ಅವರು ಭೇಟಿ ನೀಡಿದ ನಂತರ ನನ್ನ ಅದೃಷ್ಟವೇ ಖುಲಾಯಿಸಿದೆ. ಈ ಮೊದಲು ನಾನು ಯಾರು ಎಂಬುದೇ ಜನರಿಗೆ ತಿಳಿದಿರಲಿಲ್ಲ. ಈಗ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಅಂಗಡಿಗೆ ಬಂದು, ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ’ ಎಂದು ರಾಮ್ ಚೇತ್ ಹೇಳುತ್ತಾರೆ.


ಇನ್ನೊಂದೆಡೆ, ರಾಮ್ ಚೇತ್ ಎದುರಿಸುತ್ತಿರುವ ತೊಂದರೆಗಳ ಕುರಿತು ಮಾಹಿತಿ ಪಡೆಯುವುದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಅವರನ್ನು ಭೇಟಿ ಮಾಡುತ್ತಿದ್ದಾರೆ.

Join Whatsapp
Exit mobile version