Home Uncategorized ಡಬಲ್ ಫಿಟ್ನೆಸ್: ಬಾಲಕನ ‘ಡಿಪ್ಸ್ ಚಾಲೆಂಜ್’ ಗೆದ್ದ ರಾಹುಲ್ ಗಾಂಧಿ: ವೀಡಿಯೋ ವೈರಲ್

ಡಬಲ್ ಫಿಟ್ನೆಸ್: ಬಾಲಕನ ‘ಡಿಪ್ಸ್ ಚಾಲೆಂಜ್’ ಗೆದ್ದ ರಾಹುಲ್ ಗಾಂಧಿ: ವೀಡಿಯೋ ವೈರಲ್

ಬೆಂಗಳೂರು: ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಯು ದಿನದಿಂದ ದಿನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಆಸಕ್ತಿದಾಯಕ ವಿಷಯಗಳಿಂದ ಸುದ್ದಿಯಾಗುತ್ತಿದ್ದು ಅದರ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ.

ರಾಹುಲ್ ಗಾಂಧಿ ಯಾತ್ರೆಯು ಚಳ್ಳಕೆರೆ ತಾಲೂಕಿನ ಗೊಪನಹಳ್ಳಿ ತಲುಪುತ್ತಿದ್ದಮತೆ ಅಲ್ಲಿನ ಸ್ಥಳೀಯ ಹುಡುಗನೊಬ್ಬನ ‘ಪುಶ್-ಅಪ್ ಚಾಲೆಂಜ್’ ಸ್ವೀಕರಿಸಿ ನಡುರಸ್ತೆಯಲ್ಲಿಯೇ ಡಿಪ್ಸ್ ಹೊಡೆದು ಬಲಪ್ರದರ್ಶನ ಮಾಡಿ ಗಮನ ಸೆಳೆದರು. ಜೊತೆಗೆ ಕರ್ನಾಟಕ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕೂಡಾ ರಸ್ತೆಯಲ್ಲಿ ಪುಶ್ಅಪ್ಗಳನ್ನು ಮಾಡಿ ರಾಹುಲ್ ಗಾಂಧಿಗೆ ಸಾಥ್ ನೀಡಿದರು.

ರಾಹುಲ್ ಗಾಂಧಿ ನಡುರಸ್ತೆಯಲ್ಲಿಯೇ ದೈಹಿಕ ಕಸರತ್ತು ಮಾಡುವುದನ್ನು ಕಂಡು ಅಲ್ಲಿ ನೆರೆದಿದ್ದ ಕಾರ್ಯಕರ್ತರ ಸಂತೋಷ ಮುಗಿಲುಮುಟ್ಟಿತ್ತು. ಇದರ 15 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಕಾಂಗ್ರೆಸ್ ಹಂಚಿಕೊಂಡಿದ್ದು, ರಾಹುಲ್ ಗಾಂಧಿ ತಮ್ಮ ಪುಶ್-ಅಪ್ಗಳನ್ನು ಮಾಡುವಾಗ ಅವರ ಅತ್ಯುತ್ತಮ ಫಾರ್ಮ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Join Whatsapp
Exit mobile version