ಪಿಆರ್ ತಂತ್ರಗಳ ಮೂಲಕ ಚೀನಾದ ಭೌಗೋಳಿಕ ರಾಜಕೀಯ ತಂತ್ರಗಾರಿಕೆಗಳನ್ನು ಎದುರಿಸಲಾಗದು: ರಾಹುಲ್ ಗಾಂಧಿ

Prasthutha: November 23, 2020

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಚೀನಾ ಗಡಿ ಬಿಕ್ಕಟ್ಟನ್ನು ನಿರ್ವಹಿಸುತ್ತಿರುವ ರೀತಿಯ  ವಿರುದ್ಧ ಟೀಕೆಯನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಾರ್ವಜನಿಕ ಸಂಪರ್ಕ ನಿರ್ವಹಣೆ ಮತ್ತು ಮಾಧ್ಯಮ ಕುಶಲತೆಯ ಮೂಲಕ ಬೀಜಿಂಗ್ ಬೌಗೋಳಿಕ ರಾಜಕೀಯ ತಂತ್ರಗಾರಿಕೆಯ ಬೆದರಿಕೆಯನ್ನು ಎದುರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಭೂತಾನ್ ಮತ್ತು ಚೀನಾ ನಡುವಿನ ಗಡಿ ಸಮೀಪದ ಸ್ಪರ್ಧಾತ್ಮಕ ಡೋಕ್ಲಾಮ್ ಪ್ರಸ್ಥಭೂಮಿಯ ಪರಿಧಿಯಲ್ಲಿರುವ ಸಿಂಚೆ ಲಾ ಪಾಸ್ ನಿಂದ ಕೇವಲ 2.5 ಕಿ.ಮೀ ದೂರದಲ್ಲಿ ಚೀನಾ ಸೇನೆಯು ಯುದ್ಧ ಸಾಮಾಗ್ರಿ ಸಂಗ್ರಹ ಸೌಲಭ್ಯಗಳನ್ನು ನಿರ್ಮಿಸುತ್ತಿದೆ ಎಂದು ಹೇಳುವ ಎನ್.ಡಿ.ಟಿ.ವಿಯ ವರದಿಯೊಂದನ್ನು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

“ಪಿಆರ್ ನಿರ್ವಹಣೆಯ ಮಾಧ್ಯಮ ತಂತ್ರಗಾರಿಕೆಯಿಂದ ಚೀನಾದ ಭೌಗೋಳಿಕ ರಾಜಕೀಯ ತಂತ್ರವನ್ನು ಎದುರಿಸಲು ಸಾಧ್ಯವಿಲ್ಲ” ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ. “ಈ ಸರಳ ಸಂಗತಿಯು ಭಾರತ ಸರಕಾರವನ್ನು ನಡೆಸುವವರ ಮನಸ್ಸಿನಿಂದ ನುಣುಚಿಕೊಳ್ಳುತ್ತದೆ” ಎಂದು ಅವರು ಬರೆದಿದ್ದಾರೆ.

ಎನ್.ಡಿ.ಟಿ.ವಿ ಪಡೆದ ಸ್ಯಾಟಲೈಟ್ ಚಿತ್ರಗಳು 2017ರಲ್ಲಿ ಭಾರತ ಮತ್ತು ಚೀನಾ ಪಡೆಗಳು ಕಾದಾಡಿದ  ಡೋಕ್ಲಾ ದಿಂದ 7 ಕಿ.ಮೀ ದೂರದಲ್ಲಿ ಮಿಲಿಟರಿ ಗ್ರೇಡ್, ಕಠಿಣ ಸ್ಫೋಟಕ ಬಂಕರ್ ಗಳನ್ನು ನಿರ್ಮಿಸಲಾಗಿರುವುದನ್ನು ತೋರಿಸುತ್ತದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ