Home ಟಾಪ್ ಸುದ್ದಿಗಳು ರಾಹುಲ್ ಗಾಂಧಿ ಮರಳಿ ಲೋಕಸಭೆಗೆ: ಟ್ವಿಟರ್ ಬಯೋ ಬದಲಿಸಿದ ಕಾಂಗ್ರೆಸ್ ನಾಯಕ

ರಾಹುಲ್ ಗಾಂಧಿ ಮರಳಿ ಲೋಕಸಭೆಗೆ: ಟ್ವಿಟರ್ ಬಯೋ ಬದಲಿಸಿದ ಕಾಂಗ್ರೆಸ್ ನಾಯಕ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ಸೋಮವಾರ ರದ್ದುಪಡಿಸಲಾಗಿದೆ. ಇದೇ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಖಾತೆಯ ಬಯೊ ಮಾಹಿತಿಯನ್ನು ಬದಲಾವಣೆ ಮಾಡಿಕೊಂಡಿದ್ದಾರೆ.


ಮಾರ್ಚ್‌ನಲ್ಲಿ ಲೋಕಸಭೆಯಿಂದ ಅನರ್ಹಗೊಂಡ ನಂತರ, ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಬಯೋವನ್ನು ‘Dis’Qualified MP’ ಎಂದು ಹಾಕಿಕೊಂಡಿದ್ದರು. ಇದೀಗ, ಹಿಂದಿನ ಬಯೋವನ್ನು ‘Member of Parliament’ ಎಂದು ಬದಲಾಯಿಸಿದ್ದಾರೆ.


ಸುಪ್ರೀಂ ತೀರ್ಪಿನ ನಂತರ ಲೋಕಸಭೆ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ರಾಹುಲ್ ಗಾಂಧಿಯವರ ಸದಸ್ಯತ್ವದ ಅನರ್ಹತೆಯನ್ನು ಹಿಂಪಡೆದಿದ್ದು, ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

Join Whatsapp
Exit mobile version