Home ಟಾಪ್ ಸುದ್ದಿಗಳು ಅಮೇಥಿಯಿಂದ ಪಲಾಯನಗೈದ ರಾಹುಲ್ ಗಾಂಧಿ: ರವಿ ಶಂಕರ್

ಅಮೇಥಿಯಿಂದ ಪಲಾಯನಗೈದ ರಾಹುಲ್ ಗಾಂಧಿ: ರವಿ ಶಂಕರ್

ಪಟ್ನಾ: ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಲಾಯನಗೈದಿದ್ದಾರೆ ಎಂದು ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್ ಬುಧವಾರ ಲೇವಡಿ ಮಾಡಿದ್ದಾರೆ.


ವಯನಾಡು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಇರುವುದರಿಂದ ರಾಹುಲ್ ಗಾಂಧಿ ತಮ್ಮ ನೆಲೆಯನ್ನು ಬದಲಾಯಿಸಿದ್ದಾರೆ ಎಂದು ಅವರು ದೂರಿದ್ದಾರೆ.


‘ಅಮೇಥಿಯಿಂದ ರಾಹುಲ್ ಏಕೆ ಓಡಿ ಹೋಗಿದ್ದಾರೆ ? ಅವರ ಅಪ್ಪ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಧೈರ್ಯವನ್ನಾದರೂ ತೋರಬೇಕಿತ್ತು’ ಎಂದು ಅವರು ಸವಾಲು ಹಾಕಿದರು.


ಅಲ್ಲದೆ ಈ ಸಲ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲೂ ರಾಹುಲ್ ಗಾಂಧಿಗೆ ಕಠಿಣ ಸ್ಪರ್ಧೆ ಎದುರಾಗಲಿದೆ ಎಂದು ಅವರು ಹೇಳಿದರು.

Join Whatsapp
Exit mobile version