ಸಾವರ್ಕರ್ ನ ಪಾದದ ಧೂಳಿಗೂ ರಾಹುಲ್ ಗಾಂಧಿ ಸಮವಲ್ಲ: ಸಿ.ಟಿ. ರವಿ

Prasthutha|

ಬೆಂಗಳೂರು : ನಾನು ಸಾವರ್ಕರ್ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರ ಪೋಸ್ಟರ್ ಹರಿದಾಡುತ್ತಿರುವ ಕುರಿತು ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ರಾಹುಲ್ ಗಾಂಧಿ ಸಾವರ್ಕರ್ ಪಾದದ ಧೂಳಿಗೂ ಸಮವಾಗುವ ಯೋಗ್ಯತೆ ಇಲ್ಲ ಎಂದು ಹೇಳಿದ್ದಾರೆ.

- Advertisement -

ಭ್ರಷ್ಟಾಚಾರವನ್ನು ಮುಚ್ಚಿ ಹಾಕುವುದಕ್ಕಾಗಿ ಕಾಂಗ್ರೆಸ್‌ನವರು ಬೀದಿಗಿಳಿದು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾದಲ್ಲಿ ಸತ್ಯ ಹೊರಬರಲಿದೆ. ಆ ಪಕ್ಷವು ಹಗರಣಗಳ ಸರ್ದಾರವಾಗಿದೆ. ಪಾದದಿಂದ ತಲೆಯವರೆಗೂ ಹಗರಣಗಳನ್ನೇ ಹೊದ್ದು ಮಲಗಿದ ಪಕ್ಷವದು ಎಂದು ಕಾಂಗ್ರೆಸ್‌ ಪ್ರತಿಭಟನೆ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಭ್ರಷ್ಟಾಚಾರಿಗಳಿಗೆ ಭ್ರಷ್ಟಾಚಾರಿಗಳೇ ಬೆಂಬಲ ನೀಡಿ ಪ್ರತಿಭಟನೆಗಿಳಿದಿರುವುದು ಹಾಸ್ಯಾಸ್ಪದ. ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಂಡು ಗಾಂಧಿ ಕುಟುಂಬವನ್ನು ಕಾಪಾಡುವ ತಂತ್ರ ನಡೆಯುತ್ತಿದೆ. ಮೇವಿನೊಂದಿಗೆ ಪೇಪರ್ ತಿಂದವರು ಕೂಡಾ ಜೈಲಿಗೆ ಹೋಗುವುದು ನಿಶ್ಚಿತ ಎಂದು ಸಿ.ಟಿ. ರವಿ ತಿಳಿಸಿದರು.



Join Whatsapp