Home ಟಾಪ್ ಸುದ್ದಿಗಳು ತನ್ನ ಎಲ್ಲ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ವಿಲ್ ಮಾಡಿದ 78ರ ಮಹಿಳೆ

ತನ್ನ ಎಲ್ಲ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ವಿಲ್ ಮಾಡಿದ 78ರ ಮಹಿಳೆ

ಡೆಹ್ರಾಡೂನ್: ಡೆಹ್ರಾಡೂನ್‌ ನ 78 ವರ್ಷದ ಮಹಿಳೆಯೊಬ್ಬರು ತನ್ನ 50 ಲಕ್ಷ ಮೌಲ್ಯದ ಆಸ್ತಿ ಹಾಗೂ 10 ತೊಲ ಚಿನ್ನ ಸೇರಿದಂತೆ ತನ್ನ ಎಲ್ಲ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ.

ಪುಷ್ಪಾ ಮುಂಜಿಯಾಲ್ ಅವರು ಡೆಹ್ರಾಡೂನ್ ನ್ಯಾಯಾಲಯದಲ್ಲಿ ವಿಲ್ ಸಲ್ಲಿಸಿದ್ದು, ರಾಹುಲ್ ಗಾಂಧಿಗೆ ತಮ್ಮ ಆಸ್ತಿಯ ಮಾಲೀಕತ್ವದ ಶೀರ್ಷಿಕೆಯನ್ನು ನೀಡಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ವಿಚಾರಗಳು ದೇಶಕ್ಕೆ ಅಗತ್ಯ ಎಂದು ಪುಷ್ಪಾ ಮುಂಜಿಯಾಲ್ ಬಣ್ಣಿಸಿದ್ದಾರೆ. ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ, ಅದಕ್ಕಾಗಿಯೇ ನನ್ನ ಅಸ್ತಿಯನ್ನು ಅವರಿಗೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

Join Whatsapp
Exit mobile version