ವಿದ್ಯುತ್ ಬೆಲೆ ಹೆಚ್ಚಳದ ಹಿಂದೆ ಅದಾನಿ ಗ್ರೂಪ್ ಕೈವಾಡ: ರಾಹುಲ್ ಗಾಂಧಿ

Prasthutha|

- Advertisement -

ದೆಹಲಿ: ಅದಾನಿ ಗ್ರೂಪ್ ಕಲ್ಲಿದ್ದಲು ಆಮದುಗಳನ್ನು ಅತಿಯಾಗಿ ಇನ್‌ ವಾಯ್ಸ್ ಮಾಡಿದೆ. ಇದು ವಿದ್ಯುತ್ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬುಧವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಮೂಲಗಳನ್ನು ಉಲ್ಲೇಖಿಸಿ ಅವರು, ಈ ಪ್ರಕ್ರಿಯೆಯಲ್ಲಿ ಅದಾನಿ ಸಮೂಹವು ಜನರಿಂದ ಒಟ್ಟು 32,000 ಕೋಟಿ ರೂ ಹಗರಣ ಮಾಡಿದೆ ಎಂದು ಹೇಳಿದ್ದಾರೆ.

- Advertisement -

ಗೌತಮ್ ಅದಾನಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಖರೀದಿಸುತ್ತಾರೆ. ಅದು ಭಾರತಕ್ಕೆ ಬರುವ ಹೊತ್ತಿಗೆ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಅವರು ಭಾರತದ ಬಡ ಜನರ ಜೇಬಿನಿಂದ ಸರಿಸುಮಾರು 32,000 ಕೋಟಿ ರೂ. ಕಬಳಿಸಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ವಿದ್ಯುತ್ ಸಬ್ಸಿಡಿ ನೀಡಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶದಲ್ಲೂ ಅದೇ ರೀತಿ ಮಾಡುವ ಯೋಜನೆ ಹಾಕಿಕೊಂಡಿದೆ. ಅದಾನಿ ವಂಚನೆಯಿಂದಾಗಿ ತಮ್ಮ ಬಿಲ್‌ಗಳು ಹೆಚ್ಚಾಗುತ್ತಿವೆ ಎಂಬುದನ್ನು ಗ್ರಾಹಕರು ಅರ್ಥಮಾಡಿಕೊಳ್ಳಬೇಕು ಪ್ರತಿಷ್ಠಿತ ಬ್ರಿಟಿಷ್ ಪತ್ರಿಕೆ, ಫೈನಾನ್ಷಿಯಲ್ ಟೈಮ್ಸ್, ” Adani and mysterious coal prices ” ಎಂಬ ಸುದ್ದಿ ಪ್ರಕಟಿಸಿದೆ. ಆದರೆ ಈ ವಿಷಯವನ್ನು ಭಾರತದಲ್ಲಿ ಎಂದಿಗೂ ಚರ್ಚಿಸಲಾಗಿಲ್ಲ ಎಂದು ಅವರು ಹೇಳಿದರು.