ನವದೆಹಲಿ, ಜು.26: ಸೋಮವಾರ ಬೆಳಿಗ್ಗೆ ಸಂಸತ್ತಿಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ, ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಒತ್ತಾಯ ಮಾಡಿದರು.
ರಾಹುಲ್ ಗಾಂಧಿಯವರ ಜೊತೆಯಲ್ಲಿ ಸಂಸದರಾದ ಪ್ರತಾಪ್ ಸಿಂಗ್ ಬಜ್ವಾ, ರವನೀತ್ ಸಿಂಗ್ ಬಿಟ್ಟು, ದೀಪಿಂದರ್ ಸಿಂಗ್ ಹೂಡಾ ಮೊದಲಾದವರಿದ್ದು ಕೃಷಿ ಕಾಯ್ದೆಗಳ ವಿರುದ್ಧ ಬ್ಯಾನರ್ ಪ್ರದರ್ಶಿಸಿದರು ಹಾಗೂ ಘೋಷಣೆ ಕೂಗಿದರು.
ಈ ಕಾಯ್ದೆಯು ಎರಡು ಮೂರು ಮಂದಿ ಉದ್ಯಮಿಗಳಿಗೆ ಮಾತ್ರ ಉಪಯುಕ್ತವಾಗಿದ್ದು, ರೈತರಿಗೆ ಮಾರಕ ಆಗಿರುವುದರಿಂದ ಕೂಡಲೆ ಅದನ್ನು ರದ್ದು ಪಡಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿ ಮಾತನಾಡಿದರು.