Home ಟಾಪ್ ಸುದ್ದಿಗಳು ಸಂಪುಟ ಪುನರ್‌ರಚನೆ| ಇನ್ನು ಮುಂದೆ ಲಸಿಕೆ ಕೊರತೆ ಇರುವುದಿಲ್ಲವೇ?: ರಾಹುಲ್ ಗಾಂಧಿ

ಸಂಪುಟ ಪುನರ್‌ರಚನೆ| ಇನ್ನು ಮುಂದೆ ಲಸಿಕೆ ಕೊರತೆ ಇರುವುದಿಲ್ಲವೇ?: ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರದಲ್ಲಿ ನೂತನ ಆರೋಗ್ಯ ಸಚಿವರು ಅಧಿಕಾರ ಸ್ವೀಕರಿಸಿದ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದು, ಏನಾದರೂ ಬದಲಾವಣೆ ಆಗುತ್ತದೆಯೇ? ಇನ್ನು ಮುಂದೆ ಲಸಿಕೆ ಕೊರತೆ ಇರುವುದಿಲ್ಲವೇ? ಎಂದು ಟ್ವೀಟ್ ಮಾಡಿದ್ದಾರೆ.

“#Change” ಎಂಬ ಹ್ಯಾಶ್ ಟ್ಯಾಗ್ ಬಳಸಿರುವ ರಾಹುಲ್ ಗಾಂಧಿ,  ಇನ್ನು ಮುಂದೆ ಲಸಿಕೆ ಕೊರತೆ ಇರುವುದಿಲ್ಲವೇ?ಎಂದು ಪ್ರಶ್ನಿಸಿದ್ದಾರೆ.

ದೇಶದ ಲಸಿಕಾ ಅಭಿಮಾನವು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ ಮತ್ತು ಅದಕ್ಕೆ ವೇಗ ನೀಡಬೇಕಿದೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸುತ್ತಲೇ ಇದೆ.

ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರನ್ನು ಕೈಬಿಡುವ ಮೂಲಕ ಕೇಂದ್ರ ಸರ್ಕಾರವು ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ಕಾಂಗ್ರೆಸ್ ಈ ಹಿಂದೆ ಟೀಕಿಸಿತ್ತು.

Join Whatsapp
Exit mobile version