ಮುಂಬೈ: ರಾಹುಲ್ ಗಾಂಧಿ ಹಾಗೂ ಆದಿತ್ಯ ಇಬ್ಬರೂ ರಾಜ್ಯ ಹಾಗೂ ದೇಶಕ್ಕೆ ಕೆಲಸ ಮಾಡುವ ಅಪಾರ ಸಾಮರ್ಥ್ಯ ಹೊಂದಿದ್ದಾರೆ ಎಂದು ರಾಜ್ಯಸಭಾ ಸಂಸದ ಸಂಜಯ್ ರಾವುತ್ ಹೊಗಳಿದ್ದಾರೆ.
ಶನಿವಾರ ಬೆಳಿಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾದ ಬಳಿಕ ಅವರು ಮಾತನಾಡಿದ ಅವರು, ಎರಡು ಪ್ರಮುಖ ಯುವ ನಾಯಕರಾದ ರಾಹುಲ್ ಗಾಂಧಿ ಹಾಗೂ ಆದಿತ್ಯ ಠಾಕ್ರೆ, ಇಬ್ಬರೂ ಭಾರತವನ್ನು ಒಂದುಗೂಡಿಸಲು ಹೆಜ್ಜೆ ಹಾಕಲಿದ್ದಾರೆ. ಇದು ಹೊಸ ಶಕ್ತಿಯ ಉದಯಕ್ಕೆ ಕಾರಣವಾಗಲಿದೆ. ಈ ಇಬ್ಬರು ಯುವ ನಾಯಕರು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ‘ ಎಂದು ಅವರು ಹೇಳಿದ್ದಾರೆ.