Home ಜಾಲತಾಣದಿಂದ  ರಘುರಾಮ್ ರಾಜನ್ RBI ಗವರ್ನರ್ ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು: ಕೇಂದ್ರ ಸಚಿವ ರಾಜೀವ್...

 ರಘುರಾಮ್ ರಾಜನ್ RBI ಗವರ್ನರ್ ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಗಂಭೀರ ಆರೋಪ

ಬೆಂಗಳೂರು: ರಘುರಾಮ್ ರಾಜನ್ ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳುಗೆಡವಿದ್ದರು ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಆರೋಪ ಮಾಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಘುರಾಮ್ ರಾಜನ್ ತಾನು ರಾಜಕಾರಣಿಯಾ ಅಲ್ಲವಾ ಎಂಬುದನ್ನು ನಿರ್ಧರಿಸಬೇಕು. ತಾನು ವಿಫಲ ರಾಜಕಾರಣಿಯೋ, ಅಥವಾ ವಿಫಲ ಆರ್ಥಿಕ ತಜ್ಞರೋ ನಿರ್ಧರಿಸಬೇಕು. ಅವರು ಆರ್​ಬಿಐ ಗವರ್ನರ್ ಆಗಿದ್ದಾಗ ದೇಶದ ಇಡೀ ಬ್ಯಾಂಕಿಂಗ್ ಸಿಸ್ಟಂ ಮತ್ತು ಹಣಕಾಸು ವಲಯವನ್ನು ಹಾಳುಗೆಡವಿದ್ದರು’ ಎಂದು ಹೇಳಿದ್ದಾರೆ.

ರಘುರಾಮ್ ರಾಜನ್ 2013ರಿಂದ 2016ರವರೆಗೂ ಆರ್​ಬಿಐ ಗವರ್ನರ್ ಅಗಿದ್ದರು. ಅವರ ಅವಧಿಯ ಕೊನೆಯ ದಿನಗಳಲ್ಲಿ ನೋಟ್ ಬ್ಯಾನ್ ಮಾಡಲಾಗಿತ್ತು. ಗವರ್ನರ್ ಸ್ಥಾನದಿಂದ ಹೊರಹೋದ ಬಳಿಕ ಅವರು ನೋಟ್ ಬ್ಯಾನ್ ಕ್ರಮವನ್ನು ಟೀಕಿಸಿದ್ದರು. ತಮಗೆ ಗೊತ್ತಿಲ್ಲದೇ ನೋಟು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಆರೋಪ ಮಾಡಿದ್ದರು.

Join Whatsapp
Exit mobile version