ಪ್ಲಸ್ ಒನ್ ವಿದ್ಯಾರ್ಥಿಗೆ ರ್‍ಯಾಗಿಂಗ್; ಪ್ರಕರಣ ದಾಖಲು

ಕಾಸರಗೋಡು: ಕಾಲೇಜು ಕ್ಲಾಸ್  ಮುಗಿದು ತೆರಳುವ ವೇಳೆ ಬಸ್ ನಿಲ್ದಾಣದ ಒಳಗೆ ಹಿರಿಯ ವಿದ್ಯಾರ್ಥಿಗಳು ಪ್ಲಸ್ ಒನ್ ವಿದ್ಯಾರ್ಥಿಯನ್ನು ರ್‍ಯಾಗಿಂಗ್ ಗೆ ಒಳಪಡಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ.
ಕುಂಬಳೆ ಅಂಗಡಿಮುಗರ್ ಸರ್ಕಾರಿ ಕಾಲೇಜಿನ ಪ್ಲಸ್ ಒನ್ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್ ಗೆ ಒಳಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾಲ್ಪನಿಕವಾಗಿ ಮೋಟಾರ್ ಸಕಲ್ ಓಡಿಸುವಂತೆ ಹಿರಿಯ ವಿದ್ಯಾರ್ಥಿಗಳು ಒತ್ತಾಯಿಸಿದ್ದು, ಬೆದರಿಕೆಗೆ ಒಳಗಾದ ವಿದ್ಯಾರ್ಥಿ ಮೋಟಾರ್ ಸಕಲ್ ಸವಾರಿ ಮಾಡುತ್ತಿರುವಂತೆ ನಟಿಸಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ವಿದ್ಯಾರ್ಥಿಯ ಪೋಷಕರ ದೂರಿನ ಮೇರೆಗೆ ಕುಂಬಳೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.