Home ಟಾಪ್ ಸುದ್ದಿಗಳು ರಸ್ತೆಯಲ್ಲಿ ತೆಪ್ಪ ಸವಾರಿ ಮತ್ತು ಭತ್ತ ನಾಟಿ ಮಾಡಿ ಹೀಗೊಂದು ಪ್ರತಿಭಟನೆ !

ರಸ್ತೆಯಲ್ಲಿ ತೆಪ್ಪ ಸವಾರಿ ಮತ್ತು ಭತ್ತ ನಾಟಿ ಮಾಡಿ ಹೀಗೊಂದು ಪ್ರತಿಭಟನೆ !

ಬೆಂಗಳೂರು: ಬೆಂಗಳೂರಿನ ಅಂಜನಾಪುರ ಮುಖ್ಯ ರಸ್ತೆಯಲ್ಲಿ ತೆಪ್ಪ ಸವಾರಿ ಮತ್ತು ಭತ್ತ ನಾಟಿ ಮಾಡಿ ಹೀಗೊಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಅಂಜನಾಪುರ ಮುಖ್ಯ ರಸ್ತೆಯ ಡಾಮರು ಕಿತ್ತುಹೋಗಿ ಕೆಸರು ಗದ್ದೆಯ ರೀತಿ ಕಂಡುಬಂದಿದೆ. ಜೋರು ಮಳೆ ಆದಾಗ ಅಂಜನಾಪುರ ಮುಖ್ಯ ರಸ್ತೆ ತೊರೆಯಾಗಿ ಹರಿಯುತ್ತದೆ.

ಇಂದು ಸ್ಥಳೀಯ ನಾಗರಿಕರು ಪ್ರತಿಭಟನೆಗಾಗಿ ಈ ರಸ್ತೆಯಲ್ಲಿ ತೆಪ್ಪ ಓಡಿಸಿದರು. ತೆಪ್ಪ ಸವಾರಿ ಬಯಸುವವರಿಗೆ ರೂ. 20 ಶುಲ್ಕ ವಿಧಿಸಿದರು. ಕೊನೆಗೆ ರಸ್ತೆಯ ನಡುವೆ ಭತ್ತ ನಾಟಿ ಮಾಡಿ ಜನಪ್ರತಿನಿಧಿಗಳ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರು ಸ್ಥಳಕ್ಕೆ ಧಾವಿಸಿ ಬಂದು ಜನರ ಅಹವಾಲು ಆಲಿಸಿದರು. ಪರಿಹಾರ- ನಾಟಿಯಾದ ಭತ್ತ ಫಲ ನೀಡಿದರೆ ರಸ್ತೆಯ ಸಮಸ್ಯೆಗೂ ಪರಿಹಾರ ದೊರಕಿತು.

Join Whatsapp
Exit mobile version