Home ಕರಾವಳಿ ಬ್ಯಾರೀಸ್ ವೆಲ್ಫೇರ್ ಫೋರಮ್ ನಿಂದ “ಬಪ್ಪ ಬ್ಯಾರಿ ” ಪಾತ್ರಧಾರಿ ಖ್ಯಾತಿಯ ರಾಧಾಕೃಷ್ಣ ನಾವಡರಿಗೆ ಸನ್ಮಾನ

ಬ್ಯಾರೀಸ್ ವೆಲ್ಫೇರ್ ಫೋರಮ್ ನಿಂದ “ಬಪ್ಪ ಬ್ಯಾರಿ ” ಪಾತ್ರಧಾರಿ ಖ್ಯಾತಿಯ ರಾಧಾಕೃಷ್ಣ ನಾವಡರಿಗೆ ಸನ್ಮಾನ

ಅಬುಧಾಬಿ : ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ ವತಿಯಿಂದ ಖ್ಯಾತ ಯಕ್ಷಗಾನ ಪಾತ್ರಧಾರಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯ ರಾಧಾಕೃಷ್ಣ ನಾವಡ ಅವರನ್ನು ಸನ್ಮಾನಿಸಲಾಯಿತು.
ಅಬುಧಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆದ ಸಮಾರಂಭದಲ್ಲಿ ಅಬ್ದುಲ್ಲಾ ಮದುಮೂಲೆ ಸ್ವಾಗತ ಭಾಷಣ ಮಾಡಿದರು. ಮುಹಮ್ಮದ್ ಅಲಿ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದು ನಾವಡರ ಪರಿಚಯವನ್ನು ಸಭಿಕರ ಮುಂದಿಟ್ಟರು. ತದನಂತರ ಫೋರಮ್ ಎಲ್ಲ ಪದಾಧಿಕಾರಿಗಳು ಶಾಲು ಹೊದಿಸಿ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿದರು.


ಸನ್ಮಾನಕ್ಕೆ ಪ್ರತಿಕ್ರಯಿಸಿ ಮಾತನಾಡಿದ ರಾಧಾಕೃಷ ನಾವಡರು, ತಮ್ಮ ವೃತ್ತಿ ಜೀವನ ಮತ್ತು ಬಪ್ಪ ಬ್ಯಾರಿಯ ಕುರಿತು ಮಾತನಾಡಿದರು. ಮುಹಮ್ಮದ್ ಸಿದ್ದಿಕ್ ಕಾಪು ವಂದಿಸಿದರು.
ಹಮೀದ್ ಗುರುಪುರ್, ಬಷೀರ್ ಬಜ್ಪೆ, ಮುಹಮ್ಮದ್ ಕಲ್ಲಾಪು, ಇಮ್ರಾನ್ ಅಹ್ಮದ್, ಹನೀಫ್ ಉಳ್ಳಾಲ್, ಅಬ್ದುಲ್ ಮಜೀದ್ , ಬಷೀರ್ ಉಚ್ಚಿಲ್, ನವಾಜ್ ಅಹ್ಮದ್, ಇರ್ಫಾನ್ ಅಹ್ಮದ್, ಮುಜೀಬ್ ಉಚ್ಚಿಲ್, ಜಲೀಲ್ ಬಜ್ಪೆ, ಮಜೀದ್ ಆತೂರ್ ಮತ್ತು ವಿನಾಯಕ ನಾವಡರು ಸಭೆಯಲ್ಲಿ ಉಪಸ್ಥಿತರಿದ್ದರು.

Join Whatsapp
Exit mobile version