Home ಟಾಪ್ ಸುದ್ದಿಗಳು ಭಾರತೀಯ ಸಂಗೀತ ವಾದ್ಯಗಳ ನಾದವನ್ನು ವಾಹನಗಳ ಹಾರ್ನ್ ಆಗಿ ಬಳಸಿಕೊಳ್ಳಲು ಶೀಘ್ರ ಕಾನೂನು: ಗಡ್ಕರಿ

ಭಾರತೀಯ ಸಂಗೀತ ವಾದ್ಯಗಳ ನಾದವನ್ನು ವಾಹನಗಳ ಹಾರ್ನ್ ಆಗಿ ಬಳಸಿಕೊಳ್ಳಲು ಶೀಘ್ರ ಕಾನೂನು: ಗಡ್ಕರಿ

ನಾಸಿಕ್: ವಾಹನಗಳಿಗೆ ಭಾರತೀಯ ಸಂಗೀತವಾದ್ಯಗಳ ಶಬ್ದ ಹಾರ್ನ್ ಆಗಿ ಅಳವಡಿಸುವಂತೆ ಮಾಡಲು ಕಾನೂನು ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ನಾಸಿಕ್ ನಲ್ಲಿ ನಡೆದ ಹೆದ್ದಾರಿ ಉದ್ಘಾಟನಾ ಸಮಾರಂಭವೊಂದರಲ್ಲಿ ಮಾತನಾಡಿದ ಗಡ್ಕರಿ, ಆ್ಯಂಬುಲೆನ್ಸ್ ಮತ್ತು ಪೊಲೀಸ್ ವಾಹನಗಳು ಬಳಸುವ ಸೈರನ್ ಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಈಗಿರುವ ಶಬ್ದಕ್ಕೆ ಬದಲಾಗಿ ಆಲ್ ಇಂಡಿಯಾ ರೇಡಿಯೋದಲ್ಲಿ ಬರುವ ಟ್ಯೂನ್ ಅನ್ನು ಬಳಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು. ಅದೇರೀತಿ ವಾಹನಗಳ ಮೇಲಿನ ʼಕೆಂಪು ದೀಪʼವನ್ನೂ ತೆಗೆಯುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


ಈ ಕುರಿತು ಕಾನೂನನ್ನು ಶೀಘ್ರ ತರಲಾಗುತ್ತದೆ. ಕೊಳಲು, ತಬಲಾ, ವಯೋಲಿನ್, ಹಾರ್ಮೋನಿಯಂ, ಹಾರ್ಮೋನಿಕಾ ಮುಂತಾದ ಭಾರತೀಯ ಸಂಗೀತ ಸಾಧನಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
.

Join Whatsapp
Exit mobile version