Home ಟಾಪ್ ಸುದ್ದಿಗಳು ತ್ರೈಮಾಸಿಕ ನಿವಾಸಿ, ಔದ್ಯೋಗಿಕ ಅನುಮತಿ ನವೀಕರಣಕ್ಕೆ ಸೌದಿ ಸಚಿವ ಸಂಪುಟ ಒಪ್ಪಿಗೆ

ತ್ರೈಮಾಸಿಕ ನಿವಾಸಿ, ಔದ್ಯೋಗಿಕ ಅನುಮತಿ ನವೀಕರಣಕ್ಕೆ ಸೌದಿ ಸಚಿವ ಸಂಪುಟ ಒಪ್ಪಿಗೆ

ರಿಯಾಧ್ : ನಿವಾಸಿ ಅನುಮತಿಗಳ ನೀಡಿಕೆ ಮತ್ತು ನವೀಕರಣಕ್ಕೆ ಸಂಬಂಧಿಸಿದ ಹೊಸ ನಿಯಮಗಳಿಗೆ ಸೌದಿ ಅರೇಬಿಯಾ ಸಚಿವ ಸಂಪುಟ ಅನುಮೋದನೆ ನೀಡಿದೆ. ಕನಿಷ್ಠ ಮೂರು ತಿಂಗಳ ಅವಧಿಯ (ತ್ರೈಮಾಸಿಕ) ಔದ್ಯೋಗಿಕ ಮತ್ತು ನಿವಾಸಿ ಅನುಮತಿ ನವೀಕರಣ ಈ ಮೂಲಕ ಹೊಂದಬಹುದಾಗಿದೆ.

ಆದಾಗ್ಯೂ, ಈ ನಿಯಮಗಳಲ್ಲಿ ಸ್ಥಳೀಯ ಉದ್ಯೋಗಿಗಳು ಮತ್ತು ಸಂಬಂಧಿತ ವೃತ್ತಿಗಳಿಗೆ ವಿನಾಯ್ತಿಯಿದೆ ಎಂದು ವರದಿಯೊಂದು ತಿಳಿಸಿದೆ.

ಔದ್ಯೋಗಿಕ ಮತ್ತು ನಿವಾಸಿ ಅನುಮತಿಗಳ ನವೀಕರಣಕ್ಕೆ ಶುಲ್ಕ ಮತ್ತು ಹಣಕಾಸು ಪರಿಹಾರಗಳನ್ನು ನಿಯಮಗಳಿಗನುಸಾರ ಪಾವತಿಸಬಹುದು. ರಿಯಾಧ್ ನಲ್ಲಿ ಡಿಪ್ಲೊಮಾಟಿಕ್ ಕ್ವಾರ್ಟರ್ ಅಥಾರಿಟಿಯನ್ನು ರದ್ದುಗೊಳಿಸಿರುವ ಸಚಿವ ಸಂಪುಟ, ಈ ಪ್ರಾಧಿಕಾರ ನಿರ್ವಹಿಸುತ್ತಿದ್ದ ಎಲ್ಲಾ ಸೇವೆ, ಜವಾಬ್ದಾರಿಗಳನ್ನು ರಿಯಾಧ್ ನ ರಾಯಲ್ ಕಮಿಶನ್ ವ್ಯಾಪ್ತಿಗೆ ವರ್ಗಾಯಿಸಿದೆ ಎಂದು ವರದಿಗಳು ತಿಳಿಸಿವೆ.

Join Whatsapp
Exit mobile version