ದೋಹ ( ಕತಾರ್ ): ಕತಾರ್ ಇಂಡಿಯನ್ ಸೋಷಿಯಲ್ ಫೋರಮ್ (QISF) ಕರ್ನಾಟಕ ಘಟಕದ, 2021-2024 ನೇ ಸಾಲಿನ, ದಫ್ನ ಮತ್ತು ದೋಹ ಬ್ಲಾಕ್ ಗಳ, ನೂತನ ಪದಾಧಿಕಾರಿಗಳ ಚುನಾವಣೆಯು ನಡೆಯಿತು.
ದಫ್ನ ಬ್ಲಾಕ್ ನ ಅಧ್ಯಕ್ಷರಾಗಿ ಕಲಂದರ್ ಜಲಸೂರ್, ಉಪಾಧ್ಯಕ್ಷರಾಗಿ ರಫೀಖ್ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ಕೊಡ್ಲಿಪೇಟೆ, ಕಾರ್ಯದರ್ಶಿಗಳಾಗಿ ಅಫ್ರಿದಿ ಮಂಗಳೂರು ಮತ್ತು ಫಹೀಮ್ ಬಂಟ್ವಾಳ, ಸದಸ್ಯರಾಗಿ ಖಾಲಿದ್ ಬನ್ನೂರು ಹಾಗೂ ಅಬೂಬಕರ್ ಜೋಕಟ್ಟೆ ಆಯ್ಕೆಯಾದರು.
ದೋಹ ಬ್ಲಾಕ್ ನ ಅಧ್ಯಕ್ಷರಾಗಿ ಅನ್ವರ್ ಅಂಗರಗುಂಡಿ, ಉಪಾಧ್ಯಕ್ಷರಾಗಿ ಅಶ್ರಫ್ ಗೇರುಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅತೀಖ್ ಮಡಿಕೇರಿ, ಕಾರ್ಯದರ್ಶಿಗಳಾಗಿ ಇಮ್ರಾನ್ ಸುನ್ನತ್ಕೆರೆ ಮತ್ತು ಇಬ್ರಾಹಿಮ್ ಸುಳ್ಯ, ಸದಸ್ಯರಾಗಿ ಅನ್ವರ್ ಬೋಲ್ಯಾರ್ ಹಾಗೂ ಇರ್ಫಾನ್ ಅಡ್ಯಾರ್ ಆಯ್ಕೆಯಾದರು.
ಚುನಾವಣಾಧಿಕಾರಿ ಜ಼ಕರಿಯಾ ಪಾಂಡೇಶ್ವರ, ಅಶ್ರಫ್ ಪುತ್ತೂರು ರವರ ಸಹಯೋಗದೊಂದಿಗೆ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿದರು.
ನಾಯಕರ ಗುಣ ಹೇಗಿರಬೇಕು ಮತ್ತು ನಾಯಕರ ಜವಾಬ್ದಾರಿ ಏನು ಎಂಬುದರ ಬಗ್ಗೆ, ದೋಹ ವಲಯಾಧ್ಯಕ್ಷರಾದ ವಜೀ಼ರ್ ಪುಂಜಾಲಕಟ್ಟೆ, ನೂತನವಾಗಿ ಆಯ್ಕೆಯಾದ ನಾಯಕರಿಗೆ ಮನವರಿಕೆ ಮಾಡಿಕೊಟ್ಟರು. ವೇದಿಕೆಯಲ್ಲಿ ದಫ್ನ ವಲಯಾಧ್ಯಕ್ಷರಾದ ಇಬ್ರಾಹಿಮ್ ಯು. ಬಿ, QISF ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಇಂತಿಯಾಜ಼್ ಕಾರ್ನಾಡ್, IFF ಕರ್ನಾಟಕ ರಾಜ್ಯಾಧ್ಯಕ್ಷರಾದ ಇರ್ಫಾನ್ ಕಾಪು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯಾಧ್ಯಕ್ಷರಾದ ನಜೀ಼ರ್ ಪಾಷ ಮಾತನಾಡಿ, ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಕಾರ್ಯವೈಖರಿಯ ಬಗ್ಗೆ ವಿವರಿಸಿ, ನೂತನ ಪದಾಧಿಕಾರಗಳು ಸಮಾಜ ಸೇವೆಯನ್ನು ತಮ್ಮ ಪ್ರಥಮ ಗುರಿಯಾಗಿರಿಸಿ, ನಿಷ್ಪಕ್ಷಪಾತ ಜನಸೇವೆಗೆ ಮುಂದಾಗಬೇಕೆಂದು ಕರೆ ನೀಡಿದರು.
IFF ಕರ್ನಾಟಕ ರಾಜ್ಯದ ಪ್ರಧಾನ ಕಾರ್ಯದರ್ಶಿ ಸಲೀಂ ಬಂಗಾಡಿ, ದಫ್ನ ಮತ್ತು ದೋಹ ವಲಯಗಳ ಇತರ ಪದಾಧಿಕಾರಿಗಳಾದ ಇರ್ಷಾದ್ ಕುಳಾಯಿ, ಅಯ್ಯೂಬ್ ಉಳ್ಳಾಲ, ಅಬೂಬಕರ್ ಸಿದ್ದೀಖ್, ಫಾರೂಕ್ ಬೋಲೆನ್ತೂರು, ಶಫೀಖ್ ಪುತ್ತೂರು ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಕಿರ್ ಪುಂಜಾಲಕಟ್ಟೆಯವರು ನೆರವೇರಿಸಿದರು.