Home ಗಲ್ಫ್ ಭಾರತದ ಉಪ ರಾಷ್ಟ್ರಪತಿ ಜೊತೆಗಿನ ಔತಣ ರದ್ದುಪಡಿಸಿದ ಕತರ್ ಆಡಳಿತಾಧಿಕಾರಿ : ಬಿಜೆಪಿ ಮುಖಂಡೆಯ ಪ್ರವಾದಿ...

ಭಾರತದ ಉಪ ರಾಷ್ಟ್ರಪತಿ ಜೊತೆಗಿನ ಔತಣ ರದ್ದುಪಡಿಸಿದ ಕತರ್ ಆಡಳಿತಾಧಿಕಾರಿ : ಬಿಜೆಪಿ ಮುಖಂಡೆಯ ಪ್ರವಾದಿ ನಿಂದನೆ ಕಾರಣ?!

ದೋಹಾ: ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕತರ್ ಪ್ರವಾಸದಲ್ಲಿದ್ದು ಇಂದು ಮಧ್ಯಾಹ್ನ ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮಾತಾಡುವುದಿತ್ತು. ಆದರೆ ಇದೀಗ ಕತರ್ ಉಪ ಆಡಲಿತಾಧಿಕಾರಿ ವೆಂಕಯ್ಯ ನಾಯ್ಡು ಜೊತೆಗಿನ ಔತಣಕೂಟವನ್ನು ರದ್ದು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೋವಿಡ್ ಪಸರಿಸುವ ಭೀತಿ ಕಾರಣ ಈ ಭೋಜನ ಕೂಟವನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು ಈ ಬಗ್ಗೆ ಉಪ ರಾಷ್ಟ್ರಪತಿ ಕತರ್ ಪ್ರವಾಸಕ್ಕೂ ಮುನ್ನವೇ ಈ ಮಾಹಿತಿ ಅವರಿಗೆ ರವಾನಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಬಿಜೆಪಿ‌‌ ಮುಖಂಡೆ ನೂಪುರ್ ಶರ್ಮಾ ಪ್ರವಾದಿ ನಿಂದನೆ ಪ್ರಕರಣದಲ್ಲಿ ಭಾರತ ಅರಬ್ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾದದ್ದು ಸುಳ್ಳಲ್ಲ. ಕತರ್,ಕುವೈತ್, ಇರಾನ್ ಆಡಳಿತವು ಭಾರತೀಯ ರಾಯಭಾರಿಗಳಿಗೆ ಸಮನ್ಸ್ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದ್ದು ಅರಬ್ ರಾಷ್ಟ್ರಗಳು ಭಾರತದೊಂದಿಗೆ ಸೆಣಸಾಟಕ್ಕೆ ಸಿದ್ಧವಾಗುತ್ತಿದೆಯೋ ಎಂಬ ವಿಷಯ ಚರ್ಚೆಯಾಗುತ್ತಿದೆ

Join Whatsapp
Exit mobile version