ಕತಾರ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಶೂರಾ ಮಂಡಳಿಗೆ ಚುನಾವಣೆ

Prasthutha|

ದೋಹಾ: ಕೊಲ್ಲಿ ರಾಷ್ಟ್ರ ಕತಾರ್ ನ ಇತಿಹಾಸದಲ್ಲೇ ಮೊದಲ ಬಾರಿಗೆ ಅಕ್ಟೋಬರ್ 2 ರಂದು ವಿಧಾನಸಭಾ ಚುನಾವಣೆಯಲ್ಲಿ ಶೂರಾ ವ್ಯವಸ್ಥೆಯ ಮೂಲಕ ಜನಪ್ರತಿನಿಧಿಗಳ ನೇಮಕಾತಿಗೆ ಅವಕಾಶ ಕಲ್ಪಿಸಿದೆ. ಗಲ್ಫ್ ರಾಷ್ಟ್ರದಲ್ಲೇ ಇದೇ ಮೊದಲ ಬಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯತ್ತ ಹೆಜ್ಜೆಯನ್ನುಡುತ್ತಿದೆ.

- Advertisement -

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕತಾರ್ ಪ್ರಧಾನ ಮಂತ್ರಿ ಶೇಖ್ ಖಾಲಿದ್ ಬಿನ್ ಖಲೀಫಾ ಬಿನ್ ಅಬ್ದುಲ್ ಅಝೀಝ್ ಥಾನಿ ಅವರು ರಾಷ್ಟ್ರದಲ್ಲೇ ಮೊದಲ ಬಾರಿಗೆ ನಡೆಯುವ ಚುನಾವಣೆಯಲ್ಲಿ ಧನಾತ್ಮಕವಾಗಿ ಭಾಗವಹಿಸುವಂತೆ ಅಲ್ಲಿನ ನಾಗರಿಕರಿಗೆ ಕರೆ ನೀಡಿದ್ದಾರೆ. 45 ಸೀಟುಗಳಿರುವ ಶೂರಾ ಕೌನ್ಸಿಲ್ ಗೆ 30 ಸದಸ್ಯರಿಗೆ ಚುನಾವಣೆ ನಡೆಯುತ್ತಿದೆ. ಈ ಹಿಂದೆ ಕತಾರ್ ನ ಅಮೀರ್ ಆಗಿದ್ದ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಕತಾರ್ ನ ಅಮೀರ್ ಆಗಿ ನೇಮಿಸಲಾಗಿತ್ತು.

ಇನ್ನುಳಿದ 15 ಸೀಟುಗಳಿಗೆ ಕತಾರ್ ಅಮೀರ್ ನೇರ ನೇಮಕಾತಿ ನಡೆಸುತ್ತಾರೆ. ಒಟ್ಟು 284 ಸೀಟುಗಳ ಪೈಕಿ 28 ಮಹಿಳೆಯರು ಒಳಗೊಂಡಂತೆ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಕಳೆದ ಸೆಪ್ಟೆಂಬರ್ 15 ರಂದು ಬಿಡುಗಡೆಗೊಳಿಸಲಾಗಿತ್ತು.

- Advertisement -

ಶೂರಾ ಕೌನ್ಸಿಲ್ ಗೆ ಚುನಾಯಿತರಾಗುವ ಪ್ರತಿನಿಧಿಗಳಿಗೆ ಕಾನೂನು ರಚನೆ, ಬಜೆಟ್ ಅನುಮೋದನೆ ಸೇರಿದಂತೆ ರಾಷ್ಟ್ರದ ಹಿತದೃಷ್ಟಿಯಿಂದ ಪ್ರಮುಖ ನಿರ್ಧಾರವನ್ನು ತೆಗೆಯುವ ಅಧಿಕಾರವನ್ನು ಹೊಂದಿರುತ್ತಾರೆ. ಆದರೆ ಪರಮಾಧಿಕಾರ ಕತಾರ್ ನ ಅಮೀರ್ ಅವರ ಬಳಿಯಲ್ಲಿ ಉಳಿಯಲಿದೆ.

Join Whatsapp