ಮಂಗಳೂರು : PWD ಇಂಜಿನಿಯರ್ ಕುಡಿದ ಮತ್ತಿನ ಚಾಲನೆಗೆ BSNL ಮಾಜಿ ಉದ್ಯೋಗಿ ಬಲಿ । ಸಿಸಿಟಿವಿಯಲ್ಲಿ ದೃಶ್ಯ ಸೆರೆ

Prasthutha|

► ವೀಡಿಯೋ ವೀಕ್ಷಿಸಿ

- Advertisement -

ಮಂಗಳೂರು : ನಡೆದುಕೊಂಡು ಹೋಗುತ್ತಿದ್ದ ನಿವೃತ್ತ ಸರಕಾರಿ ಅಧಿಕಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ‌ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ಸರ್ಕ್ಯೂಟ್ ಹೌಸ್ ಬಳಿ  ನಡೆದಿದೆ.

ಮೃತರನ್ನು ಲೇಡಿಹಿಲ್ ನಿವಾಸಿ ಎ. ಆನಂದ  ಎಂದು ಗುರುತಿಸಲಾಗಿದೆ. ಬಿಎಸ್‌ಎನ್‌ಎಲ್ ಅಧಿಕಾರಿಯಾಗಿದ್ದ ಆನಂದ ಅವರು ನಿವೃತ್ತಿ ಬಳಿಕ ‌ಉಡುಪಿಯ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು.‌ ನಿನ್ನೆ ‌ರಾತ್ರಿ ಕಂಪೆನಿಗೆ ಸಂಬಂಧಿಸಿದ ಮೀಟಿಂಗ್ ‌ಮುಗಿಸಿ, ಬಸ್ಸಿನಿಂದಿಳಿದು ಸರ್ಕ್ಯೂಟ್ ಹೌಸ್ ರಸ್ತೆಯಾಗಿ ನಡೆದುಕೊಂಡು‌ ಹೋಗುತ್ತಿದ್ದ ಅವರಿಗೆ ಸರಕಾರಿ ಇಲಾಖೆಯೊಂದರ ಎಇಇ ಆಗಿದ್ದ ಷಣ್ಮುಗಂ‌ ಎಂಬುವವರು ಕುಡಿತದ ಮತ್ತಿನಲ್ಲಿ ಅತೀ ವೇಗ‌ ಮತ್ತು ಅಜಾಗರೂಕತೆಯಿಂದ ತನ್ನ ಕಾರು ಚಲಾಯಿಸಿ  ಆನಂದ್ ಅವರಿ‌ಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದರು.

- Advertisement -

ಗಂಭೀರ ಗಾಯಗೊಂಡ ಆನಂದ ಸ್ಥಳದಲ್ಲೇ ಮೃತಪಟ್ಟರೆ, ಆರೋಪಿ‌ ಕಾರು ಚಾಲಕ, ಸರಕಾರಿ ಅಧಿಕಾರಿ ಷಣ್ಮುಗಂ ಕಾರು ನಿಲ್ಲಿಸದೆ ಪರಾರಿಯಾಗಿದ್ದಾರೆ. ತಕ್ಷಣ ‌ಸ್ಥಳೀಯರು‌ ಇತರ ವಾಹನದಲ್ಲಿ‌ ಬೆನ್ನಟ್ಟಿ‌ ಕಾರನ್ನು ತಡೆಹಿಡಿದಿದ್ದಾರೆ. ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃತ ಆನಂದ ಅವರ‌ ಪತ್ನಿ ನೀಡಿದ ದೂರಿನಂತೆ ಆರೋಪಿ ಷಣ್ಮುಗಂ ವಿರುದ್ಧ ಕದ್ರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Join Whatsapp