ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌ ಟೂರ್ನಿ; ಪಿ.ವಿ. ಸಿಂಧು ಚಾಂಪಿಯನ್

Prasthutha|

- Advertisement -

ಲಕ್ನೋ; ಭಾರತದ ಸ್ಟಾರ್ ಶಟ್ಲರ್, ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ‘ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಬ್ಯಾಡ್ಮಿಂಟನ್‌ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಎರಡನೇ ಬಾರಿ ತಮ್ಮದಾಗಿಸಿಕೊಂಡಿದ್ದಾರೆ.
ಲಕ್ನೋದ ಬಾಬು ಬನ್ಸಾರಿ ದಾಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ‘ಆಲ್‌ ಇಂಡಿಯನ್‌’ ಫೈನಲ್ ಫೈಟ್’ನಲ್ಲಿ ಸಿಂಧು, ಭಾರತದವರೇ ಆದ ಮಾಳವಿಕಾ ಬನ್ಸೋಡ್‌ ವಿರುದ್ಧ 21-13 ಹಾಗೂ 21-16 ಅಂಕಗಳ ಅಂತರದಿಂದ, ನೇರ ಸೆಟ್‌ಗಳಲ್ಲಿ ಗೆದ್ದು ಬೀಗಿದರು.


ಸೀಮಿತ ಪ್ರೇಕ್ಷಕರೆದುರು ನಡೆದ ಫೈನಲ್ ಪಂದ್ಯ ಕೇವಲ 35 ನಿಮಿಷಗಳಲ್ಲೇ ಕೊನೆಗೊಂಡಿತು

- Advertisement -

ಇದಕ್ಕೂ ಮೊದಲು ಸೆಮಿಫೈನಲ್ ಪಂದ್ಯದಲ್ಲಿ
ರಷ್ಯಾದ ಕೊಸೆತ್ಸ್ಕಾಯಾ ಗಾಯದ ಕಾರಣ ಅರ್ಧದಲ್ಲಿಯೇ ಹಿಂದೆ ಸರಿದ ಕಾರಣ ಸಿಂಧು ಹಾದಿ ಸುಗಮಗೊಂಡಿತು. ಈ ವೇಳೆ ಸಿಂಧು 21-11ಅಂತರದಲ್ಲಿ ಮೊದಲ ಗೇಮ್ ಗೆದ್ದು ಮುನ್ನಡೆ ಸಾಧಿಸಿದ್ದರು.

ಫೈನಲ್ ಸ್ಪರ್ಧಿಗೆ ಕೋವಿಡ್ !

ಮತ್ತೊಂದೆಡೆ ಪುರುಷರ ವಿಭಾಗದ ಸಿಂಗಲ್ಸ್ ಫೈನಲ್ ಪಂದ್ಯವನ್ನು ಕೋವಿಡ್ ಕಾರಣದಿಂದಾಗಿ
ತಾತ್ಕಾಲಿಕವಾಗಿ ಮುಂದೂಡಲಾಗಿದೆ‌. ಅರ್ನೌಡ್ ಮೆರ್ಕೆಲ್ ಹಾಗೂ ಲೀಕಾಸ್ ಕ್ಲೆರ್’ಬೌಟ್ ನಡುವೆ ಭಾನುವಾರ ಫೈನಲ್ ಪಂದ್ಯ ನಡೆಯಬೇಕಿತ್ತು. ಆದರೆ ಫೈನಲ್ ತಲುಪಿದ ಓರ್ವ ಆಟಗಾರನಿಗೆ ಕೋವಿಡ್-19 ಪಾಸಿಟಿವ್ ಧೃಡಪಟ್ಟಿದೆ .ಈ ಹಿನ್ನಲೆಯಲ್ಲಿ ಫೈನಲ್ ಪಂದ್ಯವನ್ನು ಮುಂದೂಡಲಾಗಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್- BWF ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp