Home ಟಾಪ್ ಸುದ್ದಿಗಳು ಪುತ್ತೂರು: ಶಾಲೆ, ಸರಕಾರಿ ಕಚೇರಿಗಳಲ್ಲಿ ಸರಣಿ ಕಳ್ಳತನ

ಪುತ್ತೂರು: ಶಾಲೆ, ಸರಕಾರಿ ಕಚೇರಿಗಳಲ್ಲಿ ಸರಣಿ ಕಳ್ಳತನ

ಪುತ್ತೂರು: ಕುಂಬ್ರದಲ್ಲಿ ಸೋಮವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಒಳಮೊಗ್ರು ಗ್ರಾ.ಪಂ. ಕಚೇರಿ, ಗ್ರಾಮ ಆಡಳಿತಾಧಿಕಾರಿ ಕಚೇರಿ, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಗೆ ಕಳ್ಳರು ಬಾಗಿಲು ಒಡೆದು ಒಳ ನುಗ್ಗಿದ್ದಾರೆ. ಗ್ರಾ.ಪಂ ಕಚೇರಿಯಲ್ಲಿದ್ದ 7 ಸಾವಿರ ರೂ. ಮೌಲ್ಯದ ಸಿಸಿ ಕೆಮರಾದ ಡಿವಿಆರ್‌ ಕದ್ದೊಯ್ದಿದ್ದಾರೆ. ಗ್ರಾಮ ಕರಣಿಕ ಕಚೇರಿಯ ಪೀಠೋಪಕರಣಗಳಿಗೆ ಹಾನಿ ಎಸಗಿದ್ದಾರೆ.

ಕುಂಬ್ರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ ನುಗ್ಗಿರುವ ಕಳ್ಳರು ಉಪ ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ. ಮೂರು ಅಲ್ಮೇರಾಗಳ ಬಾಗಿಲು ತೆರೆದಿದ್ದು 10 ಸಾವಿರ ನಗದು ಹಾಗೂ 15 ಸಾವಿರ ಮೌಲ್ಯದ 3 ಡಿವಿಆರ್‌ಗಳನ್ನು ಕಳವು ಮಾಡಿದ್ದಾರೆ.

ಕೆಪಿಎಸ್‌ ಪ್ರಾಥಮಿಕ ಶಾಲೆಯ ಏಳು ಅಲ್ಮೇರಾ, ಟೇಬಲ್‌ಗ‌ಳನ್ನು ಜಾಲಾಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞ ಸಚಿನ್‌ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಪ್ಯ ಠಾಣೆ ಎಸ್‌ಐ ಧನಂಜಯ ಮತ್ತು ಸಿಬಂದಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version