ಪುತ್ತೂರು | ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರ, ವಂಚನೆ; ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು: WIM

- Advertisement -

ಪುತ್ತೂರು: ಪುತ್ತೂರು ನಗರ ಸಭೆಯ ಸದಸ್ಯರಾದ ಬಿಜೆಪಿ ಮುಖಂಡ ಪಿಜಿ ಜಗನ್ನಿವಾಸ್ ರಾವ್ ರವರ ಪುತ್ರ ಪ್ರದೀಪ್ ಎಂಬಾತ ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮದುವೆಯ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡು ವಿಧ್ಯಾರ್ಥಿನಿ ಗರ್ಭಧರಿಸಿ ಹೆರಿಗೆಯಾದ ನಂತರ ಮದುವೆಯಾಗಲು ನಿರಾಕರಿಸಿ ಪರಾರಿಯಾದ ಕೃತ್ಯವನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷೆ ನೌರೀನ್ ಆಲಂಪಾಡಿ ರವರು ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟ‌ಣೆ ನೀಡಿರುವ ಅವರು, ಆರೋಪಿಗಳು ಮುಸ್ಲಿಮರಾದರೆ ಜಿಲ್ಲೆಯನ್ನು ಕೋಮು ಜ್ವಾಲೆಯಲ್ಲಿ ಮುಳುಗಿಸುವ ಸದಾ ಹಿಂದುತ್ವದ ಬಗ್ಗೆ ಪ್ರತಿಪಾದಿಸುವ ಶೋಭಾ ಕರಂದ್ಲಾಜೆ ಎಲ್ಲಿ ಅಡಗಿ ಕುಳಿತಿದ್ದಾರೆ. ಹಿಂದು ಮಹಿಳೆಯರು ತಮ್ಮ ರಕ್ಷಣೆಗಾಗಿ ಕೈಯಲ್ಲಿ ತಲ್ವಾರ್, ಮೆಣಸಿನ ಹುಡಿ, ಚಾಕು ಚೂರಿ ಹಿಡಿದುಕೊಂಡು ನಡೆಯಬೇಕು. ಅಗತ್ಯ ಬಂದಾಗ ಅದನ್ನು ಪ್ರಯೋಗಿಸಬೇಕು ಎಂದು ಭಾಷಣ ಬಿಗಿಯುವ ಬಿಜೆಪಿ ಸಂಘಪರಿವಾರ ನಾಯಕರು ಈಗ ಅದನ್ನು ತಮ್ಮ ನಾಯಕನ ಪುತ್ರನ ವಿರುದ್ಧ ಪ್ರಯೋಗಿಸಲು ಮುಂದಾಗುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಆರೋಪಿಯ ತಂದೆ ಬಿಜೆಪಿ ಮುಖಂಡ 7 ತಿಂಗಳ ಗರ್ಭಿಣಿ ಯುವತಿಯನ್ನು ಗರ್ಭಪಾತ ನಡೆಸಲು ಒತ್ತಾಯಿಸಿದ್ದಾರೆಂದು, ಬಂಟ್ವಾಳದ ಡಾಕ್ಟರ್ ಒಬ್ಬರು ಅಬಾರ್ಷನ್ ಮಾಡಲು ಒಪ್ಪಿದ್ದಾರೆ, ಭ್ರೂಣವನ್ನು ಪೀಸ್ ಪೀಸ್ ಮಾಡಿ ತೆಗೆಯಬೇಕು ನಾಲ್ಕೂವರೆ ಲಕ್ಷ ರೂಪಾಯಿ ಖರ್ಚು ತಗಲುತ್ತದೆ ಎಂದು ಹೇಳಿರುವುದಾಗಿ ಸಂತ್ರಸ್ತೆಯ ತಾಯಿ ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಹಣದಾಸೆಗೆ ಸಂತ್ರಸ್ತೆಯ ಜೀವದ ಚೆಲ್ಲಾಟ ವಾಡಲು ಮುಂದಾದ ಬಂಟ್ವಾಳ ಮೂಲದ ವೈದ್ಯ ಯಾರು? ಆತನ ಹಿನ್ನೆಲೆಯನ್ನು ಹಾಗೂ ಈ ಹಿಂದೆ ಆತ ಇಂತಹ ಎಷ್ಟು ಕೃತ್ಯಗಳನ್ನು ಮಾಡಿದ್ದಾನೆ ಹಾಗೂ ಇಂತಹ ಕೃತ್ಯಗಳು ಜಿಲ್ಲೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆಯಾ ಎಂಬುದರ ಬಗ್ಗೆಯೂ ಕೂಲಂಕಷವಾಗಿ ತನಿಖೆ ನಡೆಸಬೇಕು. ಅದಲ್ಲದೇ ಸಂತ್ರಸ್ತೆಯ ತಾಯಿ ಪತ್ರಿಕಾಗೋಷ್ಠಿಯಲ್ಲಿ ತಮಗೆ ಮನೆ ಬಿಟ್ಟು ತೆರಳಬೇಕು ಇಲ್ಲದಿದ್ದರೆ ನಿಮ್ಮ ಜೀವಕ್ಕೆ ಅಪಾಯ ಎಂದು ಬೆದರಿಕೆ ಒಡ್ಡಲಾಗಿದೆ. ಹಾಗೂ ಪ್ರಕರಣ ಮುಗಿಸಲು ಹಿಂದುತ್ವ ನಾಯಕರ ನೇತೃತ್ವದಲ್ಲಿ ಹತ್ತು ಲಕ್ಷ ರೂಪಾಯಿ ವಾಗ್ದಾನ ಮಾಡಿದ್ದಾರೆ ಸೇರಿದಂತೆ ಹಲವು ವಿಚಾರಗಳನ್ನು ಹೇಳಿದ್ದಾರೆ.

- Advertisement -

ಮಹಿಳಾ ಆಯೋಗ ಕೂಡ ಈ ಬಗ್ಗೆ ಪ್ರಕರಣ ದಾಖಲಿಸಬೇಕು.ಹಾಗೂ ಯಾವುದೇ ಪ್ರಭಾವಕ್ಕೆ ಒಳಗಾಗದೆ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಸರ್ಕಾರ ಹಾಗೂ ಪೋಲಿಸ್ ಇಲಾಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

- Advertisement -


Must Read

Related Articles