ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿದ ಬಿಜೆಪಿ ಮುಖಂಡನ ಪುತ್ರನಿಂದ ವಂಚನೆ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ SDPI ವತಿಯಿಂದ ಪುತ್ತೂರು ನಗರಸಭೆಯ ಎದುರು ಬುಧವಾರ ಪ್ರತಿಭಟನೆ ನಡೆಯಿತು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮತ್ತು ಬಂಟ್ವಾಳ ಪುರಸಭೆ ಉಪಾಧ್ಯಕ್ಷ ಮೂನಿಶ್ ಅಲಿ ಮಾತನಾಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವುದು, ರಾಜಕೀಯಕ್ಕಾಗಿ ಹಿಂದುಗಳ ಮನಸ್ಸಿನಲ್ಲಿ ದ್ವೇಷ ಹುಟ್ಟಿಸುವುದು ಸಂಘಪರಿವಾರದ ಕೆಲಸವಾಗಿದೆ. ಆದರೆ ಓರ್ವ ತಾಯಿಗೆ ನ್ಯಾಯ ಕೊಡಲು ಆಗದ ಹಿಂದು ಸಮಾಜದ ಮುಖಂಡರು ಇವರ ಅಸಲಿಯತ್ತು ಈಗ ಗೊತ್ತಾಗಿದೆ. ಇಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವ ಒಂದು ಹಿಂದು ಸಂಘಟನೆಯೂ ಇಲ್ಲ. ಜಾತಿ ಜಾತಿ, ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ಇವರದಾಗಿದೆ ಪೊಲೀಸರು ಆರೋಪಿಯನ್ನು ಯಾಕೆ ಬಂಧಿಸುತ್ತಿಲ್ಲ ಸಂತ್ರಸ್ತೆಯ ನ್ಯಾಯದ ಹೋರಾಟಕ್ಕೆ ಎಸ್ ಡಿಪಿಐ ಪುತ್ತೂರು ನಾಯಕರು ಇದ್ದಾರೆ ಎಂದರು.
ಸಂತ್ರಸ್ತೆಯ ತಾಯಿ ನಮಿತಾ ಮಾತನಾಡಿ, ನಾನು ಎಲ್ಲಾ ಮುಖಂಡರಲ್ಲಿ ಮಾತನಾಡಿದ್ದೇನೆ. ಎಲ್ಲರು ಮಗುವನ್ನು ತೆಗೆಸಿ ಎಂದು ಹೇಳಿದ್ದಾರೆ ಹೊರತು ಮದುವೆ ಮಾಡಿ ಕೊಡಬೇಕೆಂದು ಯಾರು ಹೇಳಿಲ್ಲ. ಇವತ್ತು ಹುಡುಗನನ್ನು ಅವರ ಅಪ್ಪನೆ ಅಡಗಿಸಿಟ್ಟಿದ್ದಾರೆ. ನನ್ನ ಮಗಳ ಮಗುವಿಗೆ ತಂದೆಯ ಸ್ಥಾನ ಕೊಡಿಸಿ,ಹುಡಗನೊಂದಿಗೆ ರಿಜಿಸ್ಟರ್ ಮ್ಯಾರೇಜ್ ಆಗಬೇಕು ಎಂದು ಪಟ್ಟು ಹಿಡಿದರು.
ಎಸ್‌ಡಿಪಿಐ ದ.ಕ ಜಿಲ್ಲಾ ಸದಸ್ಯೆ ಝೀನತ್ ಬಂಟ್ವಾಳ ಮಾತನಾಡಿ, ವಿಚಿತ್ರವಾದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಭಾರತದ ಪ್ರಜೆ ಎಂದು ಹೇಳಿ ಅನ್ಯಾಯದ ವಿಷಯ ಬಂದಾಗ ಒಂದು ವರ್ಗವನ್ನು ಧರ್ಮವನ್ನು ಗುರಿಯಾಗಿಸಿ ನ್ಯಾಯ ಕೊಡುವುದು. ಅತ್ಯಾಚಾರ ಎಸಗಿದವನು ಮೇಲ್ವರ್ಗ,ಬಿಜೆಪಿ ಮುಖಂಡನಾಗಿದ್ದರೆ ಅಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗುವುದಿಲ್ಲ.ಅದೇ ಯಾವುದೋ ಅಬ್ದುಲ್ಲ, ಜೋಸಫ್ ಆಗಿದ್ದಾರೆ. ಶೋಭಕ್ಕ ಬೆಂಕಿ ಹಚ್ಚುತ್ತಿದ್ದರು. ಇವತ್ತು ಅವರ ಪತ್ತೆ ಇಲ್ಲ ಎಂದರು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಬಾವು ಅಧ್ಯಕ್ಷತೆ ವಹಿಸಿದರು. ತಾಜುದ್ದಿನ್ ಸಾಲ್ಮರ ಮಾತನಾಡಿದರು. ನಗರಸಭೆ ಸದಸ್ಯೆ ಪಾತಿಮಾತ್ ಜೋಹಾರ, ಪಕ್ಷದ ಪ್ರಮುಖರ ಉಪಸ್ಥಿತರಿದ್ದರು.