Home ಕರಾವಳಿ ಪುತ್ತೂರು: ನಾಪತ್ತೆಯಾಗಿದ್ದ 6ನೇ ತರಗತಿ ಬಾಲಕಿ ಪತ್ತೆ

ಪುತ್ತೂರು: ನಾಪತ್ತೆಯಾಗಿದ್ದ 6ನೇ ತರಗತಿ ಬಾಲಕಿ ಪತ್ತೆ

ಪುತ್ತೂರು: ಬಳ್ಕಾಡ್ ನಿವಾಸಿಯೋರ್ವರ ಪುತ್ರಿ, 6ನೇ ತರಗತಿ ವಿದ್ಯಾರ್ಥಿನಿ ಮನೆಯಿಂದ ಶಾಲೆಗೆಂದು ಹೋದ ಅತ್ತ ಶಾಲೆಗೂ ಬಾರದೆ, ಇತ್ತ ಮನೆಗೂ ಹಿಂದಿರುಗದೆ ನಾಪತ್ತೆಯಾಗಿ‌ ಮನೆಯವರ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸ್ ಕೇಸೂ ದಾಖಲಾಗಿತ್ತು. ಕೊನೆಗೂ ಬಾಲಕಿಯ ಪತ್ತೆಯೊಂದಿಗೆ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಬಾಲಕಿ ಕಾಸರಗೋಡಿನಲ್ಲಿ ಪತ್ತೆಯಾಗಿದ್ದು, ಮನೆಮಂದಿ ಪೊಲೀಸರೊಂದಿಗೆ ಕಾಸರಗೋಡಿಗೆ ತೆರಳಿ ಬಾಲಕಿಯನ್ನು ಪುತ್ತೂರಿಗೆ ಕರಕೊಂಡು ಬಂದಿದ್ದಾರೆ.

ಪುತ್ತೂರಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಎಂದಿನಂತೆ ಬೆಳಿಗ್ಗೆ ಮನೆಯಿಂದ ಇತರ ಮಕ್ಕಳ ಜೊತೆ KSRTC ಸಂಸ್ಥೆ ಬಸ್ಸಿನಲ್ಲಿ ಶಾಲೆಗೆಂದು ಬಂದಿದ್ದಳು. ಶಾಲೆಯಲ್ಲಿ ಇಂದು ಪರೀಕ್ಷೆ ಇತ್ತು ಎನ್ನಲಾಗಿದೆ. ಶಾಲೆಗೆ ಹೋಗದ ಬಾಲಕಿ ನೇರವಾಗಿ ಕಾಸರಗೋಡಿನ ಪರ್ಲಡ್ಕದ ಬಾಲವನಕ್ಕೆ ತೆರಳಿದ್ದಳು.

ಐಡಿ ಕಾರ್ಡ್‌ ಇಲ್ಲದ ಕಾರಣ ಬಾಲವನದ ಸಿಬ್ಬಂದಿ ಆಕೆಯನ್ನು ಒಳಗೆ ಬಿಟ್ಟಿರಲಿಲ್ಲ. ಅಲ್ಲಿಂದ ಹಿಂದಿರುಗಿದ ಬಾಲಕಿ, ಪರ್ಲಡ್ಕದಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ತೆರಳಿದ್ದಾಳೆ. ನಾನು ಶಾಲೆಗೆ ಹೋಗಿಲ್ಲ, ಇಂದು ಇಲ್ಲಿಯೇ ಇರುವುದಾಗಿ ಹೇಳಿದ್ದಾಳೆ. ಸಂಬಂಧಿಕರ ಮನೆಮಂದಿ ಆಕೆಯನ್ನು ಶಾಲೆಗೆ ಬಿಟ್ಟು ಬರಲು ಮುಂದಾದಾಗ ಅಲ್ಲಿಂದಲೂ ತಪ್ಪಿಸಿಕೊಂಡಿದ್ದಾಳೆ. ತೀವ್ರ ಹುಡುಕಾಟದ ಬಳಿಕ ಸಂಜೆ ಬಾಲಕಿ ಪತ್ತೆಯಾಗುವುದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು ಮನೆಯವರು ನಿಟ್ಟಿಸಿರು ಬಿಟ್ಟಿದ್ದಾರೆ.

Join Whatsapp
Exit mobile version