ಪುತ್ತೂರು: ಖ್ಯಾತ ನಟಿ ಅನುಷ್ಕಾ ಶೆಟ್ಟಿಯ ಮಾವನಿಂದ ಚೂರಿ ಇರಿತ

Prasthutha|

ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಪಾರ್ಕಿಂಗ್ ವಿಷಯದಲ್ಲಿ ಗಲಾಟೆ ನಡೆದು ಖ್ಯಾತ ನಟಿ ಅನುಷ್ಕಾ ಶೆಟ್ಟಿಯ ಮಾವ ಉರಮಾಲು ಗುಣಶೇಖ‌ರ್ ಶೆಟ್ಟಿ ಸದಾಶಿವ ಪೈ ಎಂಬವರಿಗೆ ಚೂರಿ ಇರಿದಿರುವ ಘಟನೆ ಇಂದು ನಡೆದಿದೆ.

- Advertisement -

ಸದಾಶಿವ ಪೈ ಅವರ ಕೈ ಗೆ ಚೂರಿ ತಾಗಿದ್ದು, ಅವರು ಪುತ್ತೂರಿನ ಸರಕಾರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಗಲಾಟೆ ಸಂದರ್ಭ ಗುಣಶೇಖ‌ರ್ ಶೆಟ್ಟಿ ಮೇಲೂ ಹಲ್ಲೆಯಾಗಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಅನುಷ್ಕಾ ಶೆಟ್ಟಿಯ ಮಾವ ಗುಣಶೇಖ‌ರ್ ಶೆಟ್ಟಿ ಹಾಗೂ ಸದಾಶಿವ ಪೈ ಮಧ್ಯೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದ್ದು, ಜಗಳ ತಾರಕಕ್ಕೇರಿ ಅನುಷ್ಕಾ ಶೆಟ್ಟಿಯ ಮಾವ ಸದಾಶಿವ ಪೈಗೆ ಚಾಕುವಿನಿಂದ ಇರಿದಿದ್ದಾರೆ. ಪುತ್ತೂರು ನಗರಠಾಣಾ ಪೊಲೀಸರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version